ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಾಡಿನ ಸುಂದರ ಗಾಯನಗಳು

ನಾನು ಇದನ್ನು ಬರೆಯುತ್ತಿರುವ ಹೊತ್ತಿನಲ್ಲಿ ಬೆಳಕು ಹರಿದಿಲ್ಲದ, ಕತ್ತಲು ತುಂಬಿದ ಬೆಳಗಿನ ಜಾವ. ರಾತ್ರಿಯಿಡಿ ತಮ್ಮ ಆಹಾರ ಅರಸುತ್ತಾ ಕಾಡೆಲ್ಲಾ ಸುತ್ತಾಡಿದ ನಿಶಾಚರ ಪಕ್ಷಿಗಳಿಗೆ ವಿಶ್ರಾಂತಿಯ ಸಮಯ. ಪ್ರಮುಖವಾಗಿ ನಮ್ಮ ಕ್ಯಾಂಪಿನ ಬಳಿ ಮೂರು ಪಕ್ಷಿಗಳ ಕೂಗು ಕೇಳುತ್ತಿದೆ. Brown Hawk Owl, Oriental Scops Owl ಮತ್ತು Jerdon’s Nightjar ಕೂಗುಗಳು ಇನ್ನೂ ರಾತ್ರಿಯ ಅನುಭವವನ್ನೇ ಕಟ್ಟಿಕೊಡುತ್ತಿದೆ. ರಾತ್ರಿಯೆಂದರೆ ಬರಿಯ ಕತ್ತಲು ಮಾತ್ರವಲ್ಲ, ಅದು ನಿಗೂಢ. ಸಮಯ ಸರಿಯುತ್ತಿದೆ. ಆಕಾಶ ಸ್ವಲ್ಪವೇ ಬೆಳಗಾಗಿದ್ದರೂ ಮಬ್ಬು ಮಬ್ಬು. ದೈತ್ಯ ಮರಗಳಿರುವ ಕಾಡು, ರಸ್ತೆ, ಕ್ಯಾಂಪಿನ ಸುತ್ತ ಮುತ್ತ ಎಲ್ಲವೂ ಇನ್ನೂ ಕತ್ತಲು. ಇಲ್ಲೇ ಹೀಗಿದ್ದರೆ ಕಾಡಿನ ಒಳಗಿನ ನನ್ನ ಮೆಚ್ಚಿನ ಕೆಲವು ಸ್ಥಳಗಳು ಹೇಗಿರಬಹುದೆಂದು ಊಹಿಸುತ್ತಿದ್ದೇನೆ. ಭಯವಾಗುತ್ತದೆ. ಅಬ್ಬಾ! ಸದ್ಯ ನಾನು ಅಲ್ಲಿಲ್ಲವಲ್ಲ. ಈಗ ಸ್ವಲ್ಪ ಬೆಳಕಾಗಿದೆ. ಅದರೆ Brown Hawk Owlಗಳಿಗೇನೋ ಅಸಹನೆ ಅನಿಸುತ್ತದೆ. ಕತ್ತಲನ್ನು ಬಿಟ್ಟುಕೊಡಲು ಸಿದ್ದವಿಲ್ಲದಂತೆ ಕೂಗುತ್ತಿದೆ. ಅರೆ! ಶುರುವಾಗಿಯೇ ಬಿಟ್ಟಿತು ಕಾಜಣಗಳ ಅಲಾಪ. ಅದು ಸತತವಾಗಿಯಲ್ಲ, ಈಗ ಕೂಗಿದರೆ ಮತ್ತೆರಡು ನಿಮಿಷ ಬಿಟ್ಟು, ವಿರಳವಾಗಿ. ಇಂತಹ ಸಮಯದಲ್ಲೇ ನಮ್ಮ ಕ್ಯಾಂಪಿನ ಗೋಡೆಯ ಸಂದಿಯಲ್ಲಿರುವ ಬಿಲದಲ್ಲಿ ವಾಸವಾಗಿರುವ ಬಾವಲಿಗಳೆರಡು ಒಳಗೆ ನುಗ್ಗಲು ಹವಣಿಸುತ್ತಿವೆ. ನಿಶಾಚರ ಪಕ್ಷಿಗಳ ಸದ್ದೆಲ್ಲಾ ಈಗ ಕ್...

ಕಾಮನ್ ಮಾರ್ಮನ್ (Papilio polytes)

ನಮ್ಮ ತೋಟದಲ್ಲಿ ಕರಿಬೇವಿನ ಸಸಿಯನ್ನು ನೆಡಲಾಗಿತ್ತು. ಇದು ಸ್ವಲ್ಪ ನಿಧಾನವಾಗಿ ಬೆಳೆಯುವ ಮರ. ಹಾಗಾಗಿ ಒಂದೆರಡು ವರ್ಷವಾಗಿದ್ದರು ಅಂತಹ ಎತ್ತರ ಬೆಳೆದಿರಲಿಲ್ಲ. ನಾನು ಅನೇಕ ವೇಳೆ ಈ ಗಿಡದ ಎಲೆಗಳ ಮೇಲೆ ಹಕ್ಕಿಯ ಹಿಕ್ಕೆ ಬಿದ್ದಿರುವುದು ಗಮನಿಸುತ್ತಿದ್ದೆ. ಆಗ ಇದ್ದಕ್ಕಿದ್ದಂತೆ ಪಾರಿವಾಳಗಳ ಸಂಖ್ಯಾಸ್ಫೋಟದಿಂದಾಗಿ ಎಲ್ಲೆಂದರಲ್ಲಿ ಅವುಗಳ ಹಿಕ್ಕೆ ಬಿದ್ದಿರುತ್ತಿತ್ತು. ಹೀಗಾಗಿ ಕರಿಬೇವಿನ ಎಲೆಗಳ ಮೇಲಿರುವ ಹಕ್ಕಿಯ ಹಿಕ್ಕೆ ವಿಶೇಷವಾಗಿ ನನ್ನ ಗಮನ ಸೆಳೆದಿರಲಿಲ್ಲ.