ಹೂವುಗಳು ಗೊಂಚಲಾಗಿ , ಗುಲಾಬಿ ಅಥವ ನೇರಳೆ ಬಣ್ಣದಲ್ಲಿ ಇರುತ್ತದೆ . ಹೊಳೆ ದಾಸವಾಳ ಸುಂದರವಾದ ಹೂವುಗಳನ್ನು ತಳೆಯುವ ಮರ. ಇದು ಭಾರತ, ಬಾಂಗ್ಲಾದೇಶ, ಚೈನ, ಥಾಯ್ಲೆಂಡ್, ಶ್ರೀಲಂಕಾ, ಮಲೇಶಿಯಾ ಇನ್ನು ಮುಂತಾದ ಆಗ್ನೇಯ ಏಶಿಯದ ದೇಶಗಳಲ್ಲಿ ಕಂಡುಬರುತ್ತದೆ. ಇದರ ಕನ್ನಡದ ಮತ್ತೊಂದು ಹೆಸರು ಹೊಳೆ ಮತ್ತಿ. ಇದಕ್ಕೆ ಇಂಗ್ಲೀಷ್‌ನಲ್ಲಿ ಕ್ವೀನ್ಸ್ ಪ್ಲವರ್, ಕ್ವೀನ್ ಆಫ್ ಪ್ಲವರ್, ಕ್ವೀನ್ ಕ್ರೇಪ್ ಮೈರ್ಟಲ್ ಮತ್ತು ಪ್ರೈಡ್ ಆಫ್ ಇಂಡಿಯಾ ಎಂಬ ಹೆಸರಿವೆ. ಹಿಂದಿಯಲ್ಲಿ ಇದರ ಹೆಸರು "ಜರುಲ್". ಇದರ ವೈಜ್ಞಾನಿಕ ಹೆಸರು "ಲ್ಯಾಗರ್ಸ್ಟ್ರೋಮಿಯ ಸ್ಪೀಸಿಯೋಸ". ಇದು ಮಹಾರಾಷ್ಟ್ರದ ರಾಜ್ಯ ಪುಷ್ಪ. ತೊಗಟೆಯಲ್ಲಿ ಸಣ್ಣ ಬಿರುಕುಗಳು ಉಂಟಾಗಿರುತ್ತದೆ. ಹೊಳೆ ದಾಸವಾಳ ಮಧ್ಯಮ ಗಾತ್ರದ ಅಂದರೆ ಸುಮಾರು ೪೦ ಮೀ. ಎತ್ತರಕ್ಕೆ ಬೆಳೆಯುವ ಮರ. ಸಾಮಾನ್ಯವಾಗಿ ಈ ಮರ ಬೆಳೆಯುವುದು ತುಂಬಾ ನಿಧಾನ. ನೀರಿನ ಹರಿವಿರುವ ಕಡೆ ಇದು ವೇಗ ಮತ್ತು ಎತ್ತರವಾಗಿ ಬೆಳೆಯುತ್ತದೆ. ಆದರೆ ಒಣ ಪ್ರದೇಶದಲ್ಲಿ ಬೆಳವಣಿಗೆ ಕುಂಠಿತಗೊಂಡು ಕುಬ್ಜವಾಗಿರುತ್ತದೆ. ಹೊಳೆ ದಾಸವಾಳ ಎಲೆಯುದುರಿಸುವ ಮರ. ಇದರ ತೊಗಟೆ ಬೂದು ಬಣ್ಣದಾಗಿದ್ದು ಸಣ್ಣ ಬಿರುಕುಗಳು ಉಂಟಾಗಿರುತ್ತದೆ. ಎಲೆಗಳು ಸರಳವಾಗಿದ್ದು ಉದ್ದಕೆ ದೀರ್ಘವೃತ್ತಾಕಾರವಾಗಿರುತ್ತದೆ. ಇದು ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಂದರೆ ಏಪ್ರಿಲ್ ನಿಂದ ಜೂನ್ ನಲ್ಲಿ ಹೂ ತಳೆಯುತ್ತದೆ. ಇದರ ಹೂವುಗಳು ಗೊಂಚಲಾ...