ಕಳೆದ ಮೇ ತಿಂಗಳ ಒಂದು ರಾತ್ರಿ ಸುಮಾರು ಹತ್ತು ಗಂಟೆ ಸಮಯದಲ್ಲಿ ಮಲಗಲು ಸಿದ್ಧತೆ ನಡೆಸಿದ್ದೆ. ಆಗ ಯಾವುದೋ ಅಪರಿಚಿತ ಪ್ರಾಣಿಯೋ ಪಕ್ಷಿಯೋ ಏನೋ ಒಂದು ಹೊರಗಡೆ ಕೂಗುತ್ತಿರುವ ಸದ್ದಾಯಿತು. ಟಾರ್ಚೊಂದನ್ನು ಹಿಡಿದು ಹೊರಗಡೆ ಹೊರಟೆ. ಪಕ್ಕದ ತೋಟದಿಂದ ಸದ್ದು ಬರುತ್ತಿದೆ ಎನ್ನುವುದೊಂದನ್ನು ಉಳಿದು ಮತ್ತೇನು ತಿಳಿಯಲಿಲ್ಲ. ನನ್ನ ಬಳಿಯಿದ್ದ ಟಾರ್ಚ್‌ನಿಂದ ಬರುವ ಬೆಳಕು ಆ ಕಗ್ಗತ್ತಲಲ್ಲಿ ಯಾವುದಕ್ಕೂ ಸಾಲುತ್ತಿರಲಿಲ್ಲ. ಆದರೂ ಸದ್ದು ಬರುತ್ತಿರುವ ದಿಕ್ಕಿನೆಡೆಗೆ ಬೆಳಕು ಬಿಟ್ಟು ನೋಡಿದೆ. ಮರಗಳಿಗೆ ಬಲೆಯಂತೆ ಹರಡಿಕೊಂಡಿದ್ದ ಬಳ್ಳಿಗಳ ನಡುವೆ ಏನೂ ಕಾಣಲಿಲ್ಲ. ಕೊನೆಯದಾಗಿ ನನ್ನ ಬಳಿಯಿದ್ದ ಮೊಬೈಲ್‌ನಲ್ಲಿ ಬರುತ್ತಿರುವ ಸದ್ದನ್ನು ರೆಕಾರ್ಡ್ ಮಾಡಿದೆ. ನಂತರ ಒಳಗೆ ಬಂದು ಆ ಸದ್ದು ಯಾವುದು ಇರಬಹುದೆಂದು ಅಂತರ್ಜಾಲದಲ್ಲಿ ಹುಡುಕುತ್ತಾ ಕುಳಿತೆ. ನನಗಿದ್ದ ದೊಡ್ಡ ಸಮಸ್ಯೆಯೆಂದರೆ ಆ ಸದ್ದು ಪ್ರಾಣಿಯದ್ದೋ, ಪಕ್ಷಿಯದ್ದೋ, ಕೀಟದ್ದೋ ಎನ್ನುವುದೇ ತಿಳಿದಿರಲಿಲ್ಲ. ಹೀಗಾಗಿ ಹುಡುಕಾಟ ವ್ಯರ್ಥ ಎನ್ನಿಸಿತು. ಆಗ ನನಗೆ ನೆನಪಾದದ್ದು ನನ್ನ ಮೊಬೈಲ್‌ನಲ್ಲಿದ್ದ BirdNet ಎನ್ನುವ ಆಂಡ್ರಾಯ್ಡ್ ಅಪ್ಲಿಕೇಶನ್. ಈ ಅಪ್ಲಿಕೇಶನ್‌ನ ವಿಶೇಷವೆಂದರೆ ಅದರಲ್ಲಿ ನಾವು ರೆಕಾರ್ಡ್ ಮಾಡಿದ ಸದ್ದಿನ ತುಣುಕನ್ನು ಅಪ್ಲೋಡ್ ಮಾಡಿ, analyse ಆಯ್ಕೆಯನ್ನು ಒತ್ತಿದರೆ ಅದು ಯಾವ ಪಕ್ಷಿಯಿರಬಹುದು ಎಂದು ಅಂದಾಜು ಮಾಡಿ ಒಂದು ಪಟ್ಟಿ ತೋರಿಸುತ್ತದೆ. ನನಗೆ ಆ ಸದ್ದು ಪಕ್ಷಿಯದ್...
’ಕಲರವ’ ಒಂದು ಪುಟ್ಟ ಗುಂಪು. ಪಕ್ಷಿವೀಕ್ಷಣೆ, ಪರಿಸರ ಸಂರಕ್ಷಣೆ, ಖಗೋಳ, ಫೋಟೊಗ್ರಫಿ, ಸೈಕ್ಲಿಂಗ್, ಸಿನಿಮಾ, ಪ್ರವಾಸ, ಹೀಗೆ ಹಲವಾರು ಚಟುವಟಿಕೆಗಳು ಮತ್ತು ಚರ್ಚೆಯ ವೇದಿಕೆ. ಸಮಾನ ಅಭಿರುಚಿಯ ಗೆಳೆಯರ ಓದು, ಓಡಾಟದ ವಿನಿಮಯ ಮತ್ತು ಆ ಮೂಲಕ ಒಡನಾಟ ಈ ಕಲರವ