ನಾನು ಚಿಪ್ಪು ಕೀಟಗಳು ಬರೆದು ಕೆಲವು ತಿಂಗಳಾಗಿತ್ತು ಅಷ್ಟೇ ನನಗೆ ಇದರೊಂದಿಗೆ ಮತ್ತೊಮ್ಮೆ ಎದುರಾಗುವ ಸಂದರ್ಭ ಬಂತು. ನಾನು ಲಾಲ್ ಬಾಗ್ ನಿಂದ ಒಂದು ದಾಸವಾಳದ ಗಿಡ ತಂದು ಕುಂಡದಲ್ಲಿ ನೆಟ್ಟು ಬೆಳೆಸತೊಡಗಿದೆ. ಚೆನ್ನಾಗಿ ಹೂ ಬಿಡುತ್ತ ಬೆಳೆಯುತ್ತಿದ್ದ ಗಿಡ ಕೆಲವೆ ವಾರಗಳಲ್ಲಿ ಚಿಪ್ಪು ಕೀಟದ ಆಕ್ರಮಣಕ್ಕೆ ಒಳಗಾಯಿತು. ಈ ಬಾರಿ ಕಾಣಿಸಿಕೊಂಡ ಕೀಟ ಹಿಂದೆ ನೋಡಿದ್ದ ಚಿಪ್ಪು ಕೀಟಗಳಂತೆ ಇರದೆ ಭಿನ್ನವಾಗಿತ್ತು. ಇದಕ್ಕೆ ಇಂಗ್ಶೀಷಿನಲ್ಲಿ ಮೀಲಿ ಬಗ್ ಎನ್ನುತ್ತಾರೆ. ನೋಡಲು ಬಿಳಿ ಬಣ್ಣದ ಕೀಟಗಾಳಾಗಿದ್ದ ಇವು ಯಾವುದೋ ಪುಡಿಯನ್ನು ಮೈ ಮೇಲೆ ಬಳಿದು ಕೊಂಡಂತೆ ಕಾಣುತ್ತಿದ್ದವು. ನೋಡುತ್ತಿದ್ದಂತೆ ಇವು ಸಂಖ್ಯೆ ಹೆಚ್ಚಾಗತೊಡಗಿತು ಹೀಗೆ ಬಿಟ್ಟರೆ ದಾಸವಾಳದ ಗಿಡವನ್ನು ಮುಗಿಸಿಬಿಡುತ್ತದೆ ಎಂದು ಅವುಗಳ ನಿರ್ಮೂಲನೆಗೆ ಕೆಲವು ಕ್ರಮಗಳನ್ನು ಕೈಗೊಂಡೆ. ಆದರೆ ಇವು ಅಷ್ಟು ಸುಲಭವಾಗಿ ಜಗ್ಗಲಿಲ್ಲ.
’ಕಲರವ’ ಒಂದು ಪುಟ್ಟ ಗುಂಪು. ಪಕ್ಷಿವೀಕ್ಷಣೆ, ಪರಿಸರ ಸಂರಕ್ಷಣೆ, ಖಗೋಳ, ಫೋಟೊಗ್ರಫಿ, ಸೈಕ್ಲಿಂಗ್, ಸಿನಿಮಾ, ಪ್ರವಾಸ, ಹೀಗೆ ಹಲವಾರು ಚಟುವಟಿಕೆಗಳು ಮತ್ತು ಚರ್ಚೆಯ ವೇದಿಕೆ. ಸಮಾನ ಅಭಿರುಚಿಯ ಗೆಳೆಯರ ಓದು, ಓಡಾಟದ ವಿನಿಮಯ ಮತ್ತು ಆ ಮೂಲಕ ಒಡನಾಟ ಈ ಕಲರವ