ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಚಿಪ್ಪು ಕೀಟಗಳು

ಸುಮಾರು ಹದಿನೈದು ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ, ಕುಂಡಗಳಲ್ಲಿ ಹೂವಿನ ಗಿಡಗಳನ್ನು ಬೆಳಿಸಿದ್ದೆವು. ಇದರಲ್ಲಿ ನಂದಿಬಟ್ಟಲು ಗಿಡವು ಸೇರಿತ್ತು. ಮೂರು ಗಿಡಗಳಿಂದ ಒಂದಷ್ಟು ಹೂವುಗಳು ಸಿಗುತ್ತಿತ್ತು. ಕೆಲವು ವರ್ಷಗಳೊ ಅಥವಾ ತಿಂಗಳುಗಳೊ ಸರಿಯಾಗಿ ನೆನಪಿಲ್ಲ ಕಳೆದಿತ್ತು, ನಂದಿಬಟ್ಟಲಿನ ಗಿಡದ ಟೊಂಗೆಯ ಮೇಲೆ ಕಂದು ಬಣ್ಣದ ಗುಳ್ಳೆಗಳು ಮೂಡ ತೊಡಗಿದವು. ಗಿಡಕ್ಕೆ ಏನೊ ಖಾಹಿಲೆ ಬಂದಿದೆ ಎಂದುಕೊಂಡೆ. ಆ ಗುಳ್ಳೆಗಳನ್ನು ಕೀಳಲು ಪ್ರಯತ್ನ ಪಟ್ಟರು ಸಾಧ್ಯವಾಗಲಿಲ್ಲ. ಈ ಗುಳ್ಳೆಗಳು ಹೆಚ್ಚಿದಂತೆಲ್ಲ ಗಿಡದ ಮೇಲೆ ಗೊದ್ದಗಳು ಓಡಾಡಲು ಶುರುಮಾಡಿದವು. ಕೆಲವೊಮ್ಮೆ ಗುಂಪಾಗಿ ಗಿಡದ ತುದಿಗಳಲ್ಲಿ ಅಥವಾ ಎಲೆಗಳ ಮರೆಯಲ್ಲಿ ತಟಸ್ಥ ವಾಗಿ ಕುಳಿತಿರುತ್ತಿದ್ದವು. ಹೀಗೆ ಅನೇಕ ದಿನಗಳವರೆಗು ಇದ್ದ ಇವನ್ನು ಕ್ರಮೇಣ ನಾನು ಮರೆತು ಬಿಟ್ಟೆ.