ಕಾಡಿನಲ್ಲಿ ಸುತ್ತಾಡುವಾಗ ಹಲವಾರು ಚಟುವಟಿಕೆಗಳಲ್ಲಿ ಮುಳುಗಿ ಹೋಗಿ ಕೆಲವೊಮ್ಮೆ ನಮಗೆ ಪ್ರಿಯವಾದ ಚಟುವಟಿಕೆಗಳನ್ನೇ ಮರೆತು ಹೋಗಿರುತ್ತೇವೆ. ಉದಾಹರಣೆಗೆ ಒಂದು ವರ್ಷ ನಾಗರಹೊಳೆಯಲ್ಲಿದ್ದಾಗ ಸುಮಾರು ಒಂದು ತಿಂಗಳು ನನಗೆ ಇಷ್ಟವಾದ ಪಕ್ಷಿವೀಕ್ಷಣೆಯನ್ನೇ ಮಾಡಿರಲಿಲ್ಲ. ನೆಲದ ಮೇಲೆ ಬಿದ್ದಿರುವ ಮರದ ಕೊಂಬೆಯನ್ನೋ ಅಥವಾ ಕಲ್ಲನ್ನೋ ಎತ್ತಿ ನೋಡುವುದು, ಹಾಗೆ ಎತ್ತಿ ನೋಡಿದಾಗ ಅಲ್ಲಿರುವ ಬಗೆಬಗೆಯ ಕೀಟಗಳು, ಚೇಳು, ಪುಟ್ಟ ಹಾವುಗಳು, ಕಪ್ಪೆ ಇವುಗಳನ್ನು ಹುಡುಕುವುದರಲ್ಲೇ ಸಮಯ ಹೋಗುತಿತ್ತು. ಇದು ಎಷ್ಟರ ಮಟ್ಟಿಗೆ ಇತ್ತೆಂದರೆ ಮಧ್ಯಾಹ್ನದ ಊಟಕ್ಕೆ ಸರಿಯಾಗಿ ಸಮಯ ಕೊಡದಂತಾಗಿ, ಊಟವನ್ನು ಸ್ವಲ್ಪ ಸ್ವಲ್ಪವಾಗಿ ತುಂಬಾ ಸಮಯದವರೆಗೂ ಮಾಡುವಂತಾಗಿತ್ತು. ಒಂದು ಬಾರಿ ಮಧ್ಯಾಹ್ನದ ಹೊತ್ತುಊಟಕ್ಕೆಂದು ಒಂದು ನೀರು ಹರಿಯುವ ಜಾಗದಲ್ಲಿ ಜೀಪನ್ನು ನಿಲ್ಲಿಸಿದೆವು. ನನ್ನೊಡನಿದ್ದ ಹುಡುಗರು ಇಬ್ಬರು ಊಟಕ್ಕೆಂದು ಹಳ್ಳದ ಒಂದು ಬದಿಗೆ ಹೋದರು. ನಾನು ಸುತ್ತ-ಮುತ್ತ ಏನಾದರು ಕಾಣುತ್ತೆದೆಯೋ ಎಂದು ಹುಡುಕುತ್ತಾ ನನ್ನ ಊಟದ ಡಬ್ಬಿಗೆ ಕೈ ಹಾಕಿದೆ. ಅಲ್ಲೇನಿದೆ!? ಅವತ್ತು ನಾನು ಊಟವನ್ನೇ ತಂದಿರಲಿಲ್ಲ. ನನ್ನ ಡಬ್ಬಿಗೆ ಊಟವನ್ನು ತುಂಬಿದ್ದು ನೆನಪಿತ್ತು, ಆದರೆ ಆ ಡಬ್ಬವನ್ನು ತೆಗೆದುಕೊಳ್ಳಲು ಮರೆತಿದ್ದೆ. ನನ್ನೊಡನಿದ್ದ ಇಬ್ಬರ ಊಟದಲ್ಲಿ ಸ್ಪಲ್ಪ ಕೇಳೋಣವೆಂದುಕೊಂಡೆ, ಆದರೆ ಅವರು ಆಗಲೇ ಊಟ ಶುರು ಮಾಡಿರುತ್ತಾರೆ ಎಂದುಕೊಂಡು ಸುಮ್ಮನಾದೆ. ತಕ್ಷಣವೇ ನ...
’ಕಲರವ’ ಒಂದು ಪುಟ್ಟ ಗುಂಪು. ಪಕ್ಷಿವೀಕ್ಷಣೆ, ಪರಿಸರ ಸಂರಕ್ಷಣೆ, ಖಗೋಳ, ಫೋಟೊಗ್ರಫಿ, ಸೈಕ್ಲಿಂಗ್, ಸಿನಿಮಾ, ಪ್ರವಾಸ, ಹೀಗೆ ಹಲವಾರು ಚಟುವಟಿಕೆಗಳು ಮತ್ತು ಚರ್ಚೆಯ ವೇದಿಕೆ. ಸಮಾನ ಅಭಿರುಚಿಯ ಗೆಳೆಯರ ಓದು, ಓಡಾಟದ ವಿನಿಮಯ ಮತ್ತು ಆ ಮೂಲಕ ಒಡನಾಟ ಈ ಕಲರವ