ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕುಟುರ ಪಕ್ಷಿ ಮತ್ತು ಮೈನಾ ಪಕ್ಷಿಯ ಜಗಳ

ಇದು ಎರಡು ಪಕ್ಷಿಗಳ ನಡುವಿನ ಜಗಳದ ಕಥೆ .  ನಾನುಶಾಲೆಯಲ್ಲಿ ಓದುತ್ತಿರುಬೇಕಾದರೆ   corporation ನವರು ನಮ್ಮ ಮನೆಯ ಮುಂದೆ   Fern Leaf Jacaranda  ಅನ್ನೋ ಬ್ರೆಜಿಲ್ ದೇಶ ಮೂಲದ ಒಂದು ಗಿಡ ನೆಟ್ಟಿದ್ರು .  ನೀವು ನೋಡಿರಬಹುದು ಆ ಗಿಡನ .

Ruddy breasted crake

ಬಿಳಿಗಿರಿರಂಗನ ಬೆಟ್ಟದಲ್ಲಿ ಬೇಡಗುಳಿ ಅಂತ ಒಂದು   coffee estate  ಇದೆ .  ಅದು   tiger reserve  ಮಧ್ಯೆ ಇರೋದ್ರಿಂದ ಅಲ್ಲಿಗೆ ಎಲ್ಲಾ ಜನ ಬೇಕಾದಂತೆ ಹೋಗ್ಲಿಕ್ಕೆ ಆಗೋದಿಲ್ಲ . Coffee estate ನಲ್ಲಿ ಕೆಲಸ ಮಾಡೋ ಜನ , estate management ನ   ಕೆಲವು ಜನ ಮಾತ್ರ ಅಲ್ಲಿಗೆ ಹೋಗ್ತಾರೆ .

ನೂರು ವರ್ಷದ ಹೊಸ ಸಿದ್ಧಾಂತ

ಮಾನವ ತನ್ನ ಇತಿಹಾಸದುದ್ದುಕ್ಕು ಹೊಸದನ್ನು ಹುಡುಕುಲು ಯತ್ನಿಸುತ್ತಲೆ ಬಂದಿದ್ದಾನೆ. ಮೊದಲಲ್ಲಿ ಅವನಿಗೆ ಹೊಸ ಅನ್ವೇಷಣೆಗಳು ತನ್ನ ಜೀವನ ಹೋರಾಟಕ್ಕಾಗಿ ಅವಶ್ಯವಾಗಿತ್ತು, ಮುಂದೆ ಮನುಷ್ಯ ಯಶಸ್ವಿಯಾಗಿ ಬದುಕಲು ಕಲಿತ ಮೇಲೂ ತನ್ನ ಕುತೂಹಲಕ್ಕಾಗಿ ಪ್ರಕೃತಿ ಒಡ್ಡುವ ವಿಸ್ಮಯಗಳಿಗೆ ಉತ್ತರಗಳನ್ನು ಹುಡುಕುತ್ತಲೆ ಬಂದ. ದಾಖಲಾದ ಇತಿಹಾಸದ ಪುಟಗಳನ್ನು ತಿರುವಿ ನೋಡಿದರೆ ನಮಗೆ ಜಗತ್ತೇ ಬೆರಗಾಗುವಂತೆ ಮಾಡಿದ ಅನೇಕ ಹೆಸರುಗಳು ಸಿಗುತ್ತವೆ.

ಪೆಲಿಕಾನ್ ಹಕ್ಕಿ

              ಲಾಲ್‌ಬಾಗ್ ಕೆರೆಯಲ್ಲಿ ಒಂದು ಸುಂದರ ಮುಂಜಾನೆ ಪೆಲಿಕಾನ್ ಹಕ್ಕಿಗಳ ವಿಹಾರ

ದೊಡ್ಡಕಾಡಿನಲ್ಲೊಂದು ಪುಟ್ಟ ನಾಟಕ

ಕಾಡಿನಲ್ಲಿ ಸುತ್ತಾಡುವಾಗ ಹಲವಾರು ಚಟುವಟಿಕೆಗಳಲ್ಲಿ ಮುಳುಗಿ ಹೋಗಿ ಕೆಲವೊಮ್ಮೆ ನಮಗೆ ಪ್ರಿಯವಾದ ಚಟುವಟಿಕೆಗಳನ್ನೇ ಮರೆತು ಹೋಗಿರುತ್ತೇವೆ. ಉದಾಹರಣೆಗೆ ಒಂದು ವರ್ಷ ನಾಗರಹೊಳೆಯಲ್ಲಿದ್ದಾಗ ಸುಮಾರು ಒಂದು ತಿಂಗಳು ನನಗೆ ಇಷ್ಟವಾದ ಪಕ್ಷಿವೀಕ್ಷಣೆಯನ್ನೇ ಮಾಡಿರಲಿಲ್ಲ. ನೆಲದ ಮೇಲೆ ಬಿದ್ದಿರುವ ಮರದ ಕೊಂಬೆಯನ್ನೋ ಅಥವಾ ಕಲ್ಲನ್ನೋ ಎತ್ತಿ ನೋಡುವುದು, ಹಾಗೆ ಎತ್ತಿ ನೋಡಿದಾಗ ಅಲ್ಲಿರುವ ಬಗೆಬಗೆಯ ಕೀಟಗಳು, ಚೇಳು, ಪುಟ್ಟ ಹಾವುಗಳು, ಕಪ್ಪೆ ಇವುಗಳನ್ನು ಹುಡುಕುವುದರಲ್ಲೇ ಸಮಯ ಹೋಗುತಿತ್ತು. ಇದು ಎಷ್ಟರ ಮಟ್ಟಿಗೆ ಇತ್ತೆಂದರೆ ಮಧ್ಯಾಹ್ನದ ಊಟಕ್ಕೆ ಸರಿಯಾಗಿ ಸಮಯ ಕೊಡದಂತಾಗಿ, ಊಟವನ್ನು ಸ್ವಲ್ಪ ಸ್ವಲ್ಪವಾಗಿ ತುಂಬಾ ಸಮಯದವರೆಗೂ ಮಾಡುವಂತಾಗಿತ್ತು. ಒಂದು ಬಾರಿ ಮಧ್ಯಾಹ್ನದ ಹೊತ್ತುಊಟಕ್ಕೆಂದು ಒಂದು ನೀರು ಹರಿಯುವ ಜಾಗದಲ್ಲಿ ಜೀಪನ್ನು ನಿಲ್ಲಿಸಿದೆವು. ನನ್ನೊಡನಿದ್ದ ಹುಡುಗರು ಇಬ್ಬರು ಊಟಕ್ಕೆಂದು ಹಳ್ಳದ ಒಂದು ಬದಿಗೆ ಹೋದರು. ನಾನು ಸುತ್ತ-ಮುತ್ತ ಏನಾದರು ಕಾಣುತ್ತೆದೆಯೋ ಎಂದು ಹುಡುಕುತ್ತಾ ನನ್ನ ಊಟದ ಡಬ್ಬಿಗೆ ಕೈ ಹಾಕಿದೆ. ಅಲ್ಲೇನಿದೆ!? ಅವತ್ತು ನಾನು ಊಟವನ್ನೇ ತಂದಿರಲಿಲ್ಲ. ನನ್ನ ಡಬ್ಬಿಗೆ ಊಟವನ್ನು ತುಂಬಿದ್ದು ನೆನಪಿತ್ತು, ಆದರೆ ಆ ಡಬ್ಬವನ್ನು ತೆಗೆದುಕೊಳ್ಳಲು ಮರೆತಿದ್ದೆ. ನನ್ನೊಡನಿದ್ದ ಇಬ್ಬರ ಊಟದಲ್ಲಿ ಸ್ಪಲ್ಪ ಕೇಳೋಣವೆಂದುಕೊಂಡೆ, ಆದರೆ ಅವರು ಆಗಲೇ ಊಟ ಶುರು ಮಾಡಿರುತ್ತಾರೆ ಎಂದುಕೊಂಡು ಸುಮ್ಮನಾದೆ. ತಕ್ಷಣವೇ ನ

ನ್ಯೂ ಹೊರೈಜನ್: ಕತ್ತಲ ಲೋಕದ ಅನಾವರಣ

ನ್ಯೂ ಹೊರೈಜನ್‍ ಗಗನ ನೌಕೆ.  Image Credit: NASA ಅಕ್ಟೋಬರ್ 1991, ಯು ಎಸ್ ಪಿ ಎಸ್ (United States Postal Service) ನಾಸಾದ ಸೌರ ಮಂಡಲದ ಅನ್ವೇಷಣೆ ಕುರಿತು ಅಂಚೆಚೀಟಿಯ ಸರಣಿಯನ್ನು ಹೊರತಂದಿತು . ಅದರಲ್ಲಿ ಒಂದು ಚೀಟಿ ಬಹುತೇಕ ಜನರ ಗಮನ ಸೆಳೆಯಿತು ಏಕೆಂದರೆ ಆ ಚೀಟಿ ಪ್ಲೂಟೊ ಕುರಿತಾಗಿತ್ತು ಮತ್ತು ಅದರಲ್ಲಿ “ ಪ್ಲೂಟೊ - ಇನ್ನು ಅನ್ವೇಷಿಸಲಾಗಿಲ್ಲ ” ಎಂಬ ಬರಹವಿತ್ತು . ಇದಕ್ಕೆ ಕಾರಣ ಅಂದಿನವರೆಗು ನಾಸಾ ಹೊರಗಿನ ಸೌರಮಂಡಲವನ್ನು ಅನ್ವೇಷಿಸಲು   ಕಳುಹಿಸಿದ್ದ ಯಾವುದೆ ಆಕಾಶಕಾಯ ಕೂಡ ಪ್ಲೂಟೊ ಸಮೀಪ ಸಾಗಿರಲಿಲ್ಲ !!!

ರಣಹದ್ದುಗಳು

ಒಂದು ಬೆಳಗ್ಗೆ ನಾಗರಹೊಳೆಯ ಹಸಿರು ಗದ್ದೆ ರಸ್ತೆಯಲ್ಲಿ ಕಾಟಿಯೊಂದು ರಸ್ತೆಯ ಬದಿಯಲ್ಲಿ ಸತ್ತು ಬಿದ್ದಿತ್ತು . ಆ ಜಾಗದಲ್ಲಿ ಹೆಣ್ಣು ಹುಲಿಯೊಂದು ತನ್ನೆರಡು ಮರಿಗಳೊಂದಿಗೆ ಓಡಾಡುತ್ತಿದ್ದ ವಿಷಯ ತಿಳಿದಿತ್ತು . ಹಾಗಾಗಿ ಈ ಕೆಲಸ ಆ ಹುಲಿಯದ್ದೇ ಇರಬಹುದು ಎನ್ನಿಸಿತು . ಆದರೆ ಮೊದಲು ಕಂಡಿದ್ದು ಸತ್ತು ಬಿದ್ದಿದ್ದ ಕಾಟಿಯಲ್ಲ , ಅದರ ಸುತ್ತ ನೆರೆದಿದ್ದ ಸುಮಾರು ಮುವತ್ತು ಬಿಳಿ ಎದೆಯ ರಣಹದ್ದುಗಳು (White-rumped Vulture). ಹುಲಿ ತಿನ್ನದೆ ಬಿಟ್ಟಿದ್ದ ಸುಮಾರು ಅರ್ಧದಷ್ಟು ಕಾಟಿಯ ಭಾಗ ರಣಹದ್ದುಗಳಿಗೆ ಭರ್ಜರಿ ಭೋಜನ ಒದಗಿಸಿತ್ತು .

ಕಾಗೆ

ಕಾಗೆ. ನಮ್ಮೊಡನೆ ಬದುಕುತ್ತಿರುವ ಬುದ್ಧಿವಂತ ಪಕ್ಷಿ. ಪ್ರಸಿದ್ಧ ಪಂಚತಂತ್ರ ಕಥೆಗಳಲ್ಲಿ ಇದರ ಉಲ್ಲೇಖವಿದೆ. ಜಾಢಮಾಲಿ. ಕಾಗೆಗಳಿಲ್ಲದ ನಮ್ಮ ನಗರಗಳು ಈಗಿರುವದಕ್ಕಿಂತ ಅಧ್ವಾನವಾಗಿರುತ್ತಿತ್ತು. ಅವಕಾಶವಾದಿ. ನಗರದ ಗದ್ದಲಕ್ಕೆ ಹೆದರಿ ಕಣ್ಮರೆಯಾದ ಗುಬ್ಬಿಯಂತಲ್ಲದೆ ಸಿಕ್ಕ ಸಣ್ಣ ಅವಕಾಶವನ್ನು ಬಳಸಿಕೊಂಡು ಯಶಸ್ವಿಯಾಗಿ ಬದುಕುತ್ತಿರುವ ಪಕ್ಷಿ. ಒಂದು ಕಾಗೆ ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಒಂದು ಕೃತಕ ಮರದ ಮೇಲೆ ಗೂಡು ಮಾಡಿ ಸುದ್ದಿ ಮಾಡಿತ್ತು. ನಮ್ಮ ಮನೆ ಹತ್ತಿರ ಇದ್ದ ಎರಡು ತೆಂಗಿನ ಮರದಲ್ಲಿನ ಕಾಗೆಗಳಿಗೂ ನನಗೂ ತುಂಬಾ ಜಗಳವಾಗಿತ್ತು. ಯಾವುದೋ ಕಾರಣಕ್ಕೆ ನಾನು ಹೊರಗೆ ಬಂದ ಕ್ಷಣ ಗದ್ದಲ ಮಾಡಿ, ಕುಟುಕಲು ಪ್ರಯತ್ನಿಸುತ್ತಿತ್ತು. ನಾನು ದ್ವೇಷ ತೀರಿಸಿಕೊಳ್ಳಲು ರಾತ್ರಿಯ ಹೊತ್ತು ಅದರ ಗೂಡುಗಳನ್ನೆಲ್ಲಾ ಹಾಳು ಮಾಡಿದ್ದೇನೆ. ನಮ್ಮ ಮನೆ ಕಟ್ಟುವಾಗ ಮರಗಳನ್ನೆಲ್ಲಾ ಕಡಿದು ಹಾಕಿದೆವು. ಇವೆಲ್ಲಾ ನಡೆದು ಹತ್ತು ವರ್ಷಗಳೇ ಆಯ್ತು.ಈಗಲೂ ಕಾಗೆಗಳು ಸುತ್ತ ಮುತ್ತಲಿರುವ ಸಣ್ಣ ಮರಗಳಲ್ಲಿ ಗೂಡು ಮಾಡಿಕೊಂಡಿದೆ. ಈಗಲೂ ಒಮ್ಮೊಮ್ಮೆ ನನ್ನ ನೋಡಿ ಗದ್ದಲ ಮಾಡುತ್ತವೆ. ಇದು ಅದೇ ಕಾಗೆಯೇ? ಕಾಗೆಗೆಷ್ಟು ವಯಸ್ಸು? ನಾವೆಲ್ಲಾ ಕಾಗೆಗಳನ್ನು ನೋಡಿದ ಕ್ಷಣ ಅವೆಲ್ಲಾ ಒಂದೇ ರೀತಿಯದ್ದೆಂದು ತಿಳಿಯುತ್ತೇವೆ. ಆದರೆ ಅದರಲ್ಲೂ ಎರಡು ಜಾತಿಯ ಕಾಗೆಗಳಿವೆ.ಒಂದು ಕತ್ತಿನ ಸುತ್ತ ಬೂದು ಬಣ್ಣದ ಪಟ್ಟಿಯಿರುವ ಊರುಕಾಗೆ (House Crow) ಮತ

ನೆಲದ ಮೇಲಿನ ಪಕ್ಷಿಗಳು

ಬಂಡಿಪುರದ ಮೋಯಾರ್ ಕುರುಚಲು ಕಾಡು, ಹುಲ್ಲುಗಾವಲಿನಲ್ಲಿ ಸುತ್ತಾಡುವಾಗ ಎಷ್ಟೊಂದು ಪಕ್ಷಿಗಳು ಹಾರಿ ಮರೆಯಾಗುತ್ತಿದ್ದವು. ಎಲ್ಲೋ ಮರದ ಮೇಲೆ ಕುಳಿತರೆ ಹುಡುಕಬಹುದೇನೋ, ಆದರೆ ಹುಲ್ಲುಗಳ ನಡುವೆ, ಪೊದೆಗಳ ಮಧ್ಯೆ ಅಡಗಿ ಕುಳಿತ ಅವುಗಳನ್ನು ಹುಡುಕಲು ಅಸಾಧ್ಯವಾದುದಕ್ಕೆ ಆ ಪಕ್ಷಿಗಳ ಬಣ್ಣವೂ ಕಾರಣ.

ಚಂದ್ರನ ಚಲನೆಗಳು

ನಮಗೆ ತಿಳಿದಿರುವಂತೆ ನಮ್ಮ ಗೆಲಾಕ್ಸಿಯಲ್ಲಿ ಎಲ್ಲಾ ನಕ್ಷತ್ರಗಳು ಗೆಲಾಕ್ಸಿಯ ಕೇಂದ್ರದ ಸುತ್ತ, ಗ್ರಹಗಳು ನಕ್ಷತ್ರಗಳ ಸುತ್ತ, ಆ ಗ್ರಹಗಳನ್ನು ಕೆಲವು ಉಪಗ್ರಹಗಳು ಸುತ್ತುತ್ತಾ ಎಲ್ಲವೂ ಸತತ ಚಲನೆಯಲ್ಲಿವೆ. ನಮ್ಮ ಸೌರವ್ಯೂಹದ ಮಟ್ಟಿಗೆ ಹೇಳುವುದಾದರೆ ಸೂರ್ಯನ ಸುತ್ತ ಪ್ರಮುಖವಾಗಿ ಎಂಟು ಗ್ರಹಗಳು, ಕುಬ್ಜಗ್ರಹಗಳು (Dwarf Planets – Pluto ಈಗ ಒಂದು ಕುಬ್ಜಗ್ರಹ ಪಟ್ಟಿಯಲ್ಲಿರುವ ಗ್ರಹ), ಧೂಮಕೇತುಗಳು, ಅನೇಕ ಕ್ಷುದ್ರಗ್ರಹಗಳು (ಮಂಗಳ ಮತ್ತು ಗುರು ಗ್ರಹದ ನಡುವೆ ಇರುವ ಪಟ್ಟಿ), ಸುತ್ತುತ್ತಿವೆ.

ಹೊಳೆ ದಾಸವಾಳ

ಹೂವುಗಳು ಗೊಂಚಲಾಗಿ , ಗುಲಾಬಿ ಅಥವ ನೇರಳೆ ಬಣ್ಣದಲ್ಲಿ ಇರುತ್ತದೆ . ಹೊಳೆ ದಾಸವಾಳ ಸುಂದರವಾದ ಹೂವುಗಳನ್ನು ತಳೆಯುವ ಮರ. ಇದು ಭಾರತ, ಬಾಂಗ್ಲಾದೇಶ, ಚೈನ, ಥಾಯ್ಲೆಂಡ್, ಶ್ರೀಲಂಕಾ, ಮಲೇಶಿಯಾ ಇನ್ನು ಮುಂತಾದ ಆಗ್ನೇಯ ಏಶಿಯದ ದೇಶಗಳಲ್ಲಿ ಕಂಡುಬರುತ್ತದೆ. ಇದರ ಕನ್ನಡದ ಮತ್ತೊಂದು ಹೆಸರು ಹೊಳೆ ಮತ್ತಿ. ಇದಕ್ಕೆ ಇಂಗ್ಲೀಷ್‌ನಲ್ಲಿ ಕ್ವೀನ್ಸ್ ಪ್ಲವರ್, ಕ್ವೀನ್ ಆಫ್ ಪ್ಲವರ್, ಕ್ವೀನ್ ಕ್ರೇಪ್ ಮೈರ್ಟಲ್ ಮತ್ತು ಪ್ರೈಡ್ ಆಫ್ ಇಂಡಿಯಾ ಎಂಬ ಹೆಸರಿವೆ. ಹಿಂದಿಯಲ್ಲಿ ಇದರ ಹೆಸರು "ಜರುಲ್". ಇದರ ವೈಜ್ಞಾನಿಕ ಹೆಸರು "ಲ್ಯಾಗರ್ಸ್ಟ್ರೋಮಿಯ ಸ್ಪೀಸಿಯೋಸ". ಇದು ಮಹಾರಾಷ್ಟ್ರದ ರಾಜ್ಯ ಪುಷ್ಪ. ತೊಗಟೆಯಲ್ಲಿ ಸಣ್ಣ ಬಿರುಕುಗಳು ಉಂಟಾಗಿರುತ್ತದೆ. ಹೊಳೆ ದಾಸವಾಳ ಮಧ್ಯಮ ಗಾತ್ರದ ಅಂದರೆ ಸುಮಾರು ೪೦ ಮೀ. ಎತ್ತರಕ್ಕೆ ಬೆಳೆಯುವ ಮರ. ಸಾಮಾನ್ಯವಾಗಿ ಈ ಮರ ಬೆಳೆಯುವುದು ತುಂಬಾ ನಿಧಾನ. ನೀರಿನ ಹರಿವಿರುವ ಕಡೆ ಇದು ವೇಗ ಮತ್ತು ಎತ್ತರವಾಗಿ ಬೆಳೆಯುತ್ತದೆ. ಆದರೆ ಒಣ ಪ್ರದೇಶದಲ್ಲಿ ಬೆಳವಣಿಗೆ ಕುಂಠಿತಗೊಂಡು ಕುಬ್ಜವಾಗಿರುತ್ತದೆ. ಹೊಳೆ ದಾಸವಾಳ ಎಲೆಯುದುರಿಸುವ ಮರ. ಇದರ ತೊಗಟೆ ಬೂದು ಬಣ್ಣದಾಗಿದ್ದು ಸಣ್ಣ ಬಿರುಕುಗಳು ಉಂಟಾಗಿರುತ್ತದೆ. ಎಲೆಗಳು ಸರಳವಾಗಿದ್ದು ಉದ್ದಕೆ ದೀರ್ಘವೃತ್ತಾಕಾರವಾಗಿರುತ್ತದೆ. ಇದು ಸಾಮಾನ್ಯವಾಗಿ ಬೇಸಿಗೆಯಲ್ಲಿ ಅಂದರೆ ಏಪ್ರಿಲ್ ನಿಂದ ಜೂನ್ ನಲ್ಲಿ ಹೂ ತಳೆಯುತ್ತದೆ. ಇದರ ಹೂವುಗಳು ಗೊಂಚಲಾ

ಹೊಂಗೆ

ಹೊಂಗೆ ಅನೇಕ ಕೀಟಗಳನ್ನು ಆಕರ್ಷಿಸುತ್ತದೆ .  ನಮ್ಮ ದೇಶದಲ್ಲಿ ಅದರಲ್ಲು ದಕ್ಷಿಣ ಭಾರತದಲ್ಲಿ ಅತ್ಯಂತ ಸಾಮಾನ್ಯವಾಗಿ ಕಾಣಸಿಗುವ ಮರ ಯಾವುದು ಎಂದರೆ ಅದು ಹೊಂಗೆ ಎಂದೆ ಹೇಳಬಹುದು . ಈ ಮರಗಳು ಏಶಿಯಾದ ಉಷ್ಣ ಮತ್ತು ಸಮಶೀತೋಷ್ಣ ವಲಯದಲ್ಲಿ ಕಂಡು ಬರುತ್ತದೆ . ಭಾರತ , ಚೈನ , ಮಲೇಶಿಯಾ , ಇಂಡೋನೇಶಿಯಾ ದೇಶಗಳು ಈ ಮರದ ಆವಾಸ ಸ್ಥಾನ . ಈ ಮರಕ್ಕೆ ಹಿಂದಿಯಲ್ಲಿ ಕರಂಜ್ , ತಮಿಳಿನಲ್ಲಿ ಪುಂಗೈ , ತೆಲುಗಿನಲ್ಲಿ ಕಾನುಗ ಮತ್ತು ಸಂಸ್ಕೃತದಲ್ಲಿ ನಕ್ತಮಾಲ ಎಂಬ ಹೆಸರಿವೆ . ವೈಜ್ಞಾನಿಕವಾಗಿ ಮಿಲ್ಲೆಟಿಯ ಪಿನ್ನಾಟ (Milletia pinnata) ಎಂಬ ಹೆಸರಿದೆ .

ಮೊದಲ ಮಳೆ!!!

ಬಿರು ಬೇಸಿಗೆಯಲ್ಲಿ ನಮ್ಮ ದೇಶವನ್ನೊಮ್ಮೆ ನೆನೆಸಿಕೊಳ್ಳಿ, ಭೂಮಿಯಲ್ಲಿ ಇದ್ದ ನೀರೆಲ್ಲ ಆವಿಯಾಗಿ ವಾತಾವರಣದಲ್ಲಿ ಸೇರಿಕೊಂಡಿರುತ್ತದೆ.

ಹರ್ಮಿಟ್ ಏಡಿ

ನೀಲಿ ಸಾಗರದ ಮಧ್ಯೆ ಹಸಿರು ಅಟಾಲ್ ಗಳಿಂದ , ಮಾಲೆಯಂಥ ಆಕಾರವನ್ನು ಹೊಂದಿರುವ ಮಾಲ್ಡೀವ್ಸ್‌ನ ಬಿಳಿ ತೀರದ ಮೇಲೆ ಕುಳಿತು ನಮ್ಮನ್ನು ಕರೆದುಕೊಂಡು ಹೋಗಬೇಕಿದ್ದ ಹಾಯಿದೋಣಿಗಾಗಿ ಕಾಯುತ್ತಿದ್ದೆವು

ಬ್ಲ್ಯಾಕ್ ಕರೆಂಟ್

ಸುಮಾರು ಒಂದೂವರೆ ಶತಮಾನದ ಹಿಂದೆ ಇನ್ನು ವಿಶ್ವದ ಬಹುತೇಕ ಜನರು ಮೇಣದ ಬತ್ತಿಯ ಅಥವಾ ಎಣ್ಣೆ ದೀಪದ ಮೇಲೆ ಅವಲಂಬಿತಾರಗಿದ್ದ ಸಮಯದಲ್ಲಿ ಆಲ್ಟರ್ನೇಟಿಂಗ್ ಕರೆಂಟ್ (ಪರ್ಯಾಯ ವಿದ್ಯುತ್ ಪ್ರವಾಹ)ಅನ್ನು ಕಂಡುಹಿಡಿಯಲಾಯಿತು.