ವಿಷಯಕ್ಕೆ ಹೋಗಿ

ಕಾಗೆ



ಕಾಗೆ. ನಮ್ಮೊಡನೆ ಬದುಕುತ್ತಿರುವ ಬುದ್ಧಿವಂತ ಪಕ್ಷಿ. ಪ್ರಸಿದ್ಧ ಪಂಚತಂತ್ರ ಕಥೆಗಳಲ್ಲಿ ಇದರ ಉಲ್ಲೇಖವಿದೆ. ಜಾಢಮಾಲಿ. ಕಾಗೆಗಳಿಲ್ಲದ ನಮ್ಮ ನಗರಗಳು ಈಗಿರುವದಕ್ಕಿಂತ ಅಧ್ವಾನವಾಗಿರುತ್ತಿತ್ತು. ಅವಕಾಶವಾದಿ. ನಗರದ ಗದ್ದಲಕ್ಕೆ ಹೆದರಿ ಕಣ್ಮರೆಯಾದ ಗುಬ್ಬಿಯಂತಲ್ಲದೆ ಸಿಕ್ಕ ಸಣ್ಣ ಅವಕಾಶವನ್ನು ಬಳಸಿಕೊಂಡು ಯಶಸ್ವಿಯಾಗಿ ಬದುಕುತ್ತಿರುವ ಪಕ್ಷಿ. ಒಂದು ಕಾಗೆ ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಒಂದು ಕೃತಕ ಮರದ ಮೇಲೆ ಗೂಡು ಮಾಡಿ ಸುದ್ದಿ ಮಾಡಿತ್ತು.

ನಮ್ಮ ಮನೆ ಹತ್ತಿರ ಇದ್ದ ಎರಡು ತೆಂಗಿನ ಮರದಲ್ಲಿನ ಕಾಗೆಗಳಿಗೂ ನನಗೂ ತುಂಬಾ ಜಗಳವಾಗಿತ್ತು. ಯಾವುದೋ ಕಾರಣಕ್ಕೆ ನಾನು ಹೊರಗೆ ಬಂದ ಕ್ಷಣ ಗದ್ದಲ ಮಾಡಿ, ಕುಟುಕಲು ಪ್ರಯತ್ನಿಸುತ್ತಿತ್ತು. ನಾನು ದ್ವೇಷ ತೀರಿಸಿಕೊಳ್ಳಲು ರಾತ್ರಿಯ ಹೊತ್ತು ಅದರ ಗೂಡುಗಳನ್ನೆಲ್ಲಾ ಹಾಳು ಮಾಡಿದ್ದೇನೆ. ನಮ್ಮ ಮನೆ ಕಟ್ಟುವಾಗ ಮರಗಳನ್ನೆಲ್ಲಾ ಕಡಿದು ಹಾಕಿದೆವು. ಇವೆಲ್ಲಾ ನಡೆದು ಹತ್ತು ವರ್ಷಗಳೇ ಆಯ್ತು.ಈಗಲೂ ಕಾಗೆಗಳು ಸುತ್ತ ಮುತ್ತಲಿರುವ ಸಣ್ಣ ಮರಗಳಲ್ಲಿ ಗೂಡು ಮಾಡಿಕೊಂಡಿದೆ. ಈಗಲೂ ಒಮ್ಮೊಮ್ಮೆ ನನ್ನ ನೋಡಿ ಗದ್ದಲ ಮಾಡುತ್ತವೆ. ಇದು ಅದೇ ಕಾಗೆಯೇ? ಕಾಗೆಗೆಷ್ಟು ವಯಸ್ಸು?

ನಾವೆಲ್ಲಾ ಕಾಗೆಗಳನ್ನು ನೋಡಿದ ಕ್ಷಣ ಅವೆಲ್ಲಾ ಒಂದೇ ರೀತಿಯದ್ದೆಂದು ತಿಳಿಯುತ್ತೇವೆ. ಆದರೆ ಅದರಲ್ಲೂ ಎರಡು ಜಾತಿಯ ಕಾಗೆಗಳಿವೆ.ಒಂದು ಕತ್ತಿನ ಸುತ್ತ ಬೂದು ಬಣ್ಣದ ಪಟ್ಟಿಯಿರುವ ಊರುಕಾಗೆ (House Crow) ಮತ್ತೊಂದು ಪೂರ್ತಿ ಕಪ್ಪಾಗಿರುವ ಕಾಡು ಕಾಗೆ (Indian Jungle Crow). ಮೇಲಿನ ಚಿತ್ರದಲ್ಲಿ ಅವುಗಳ ವ್ಯತ್ಯಾಸವನ್ನು ಸುಲಭವಾಗಿ ಗುರುತಿಸಬಹುದು. ಕಾಡು ಕಾಗೆ ಅದರ ಹೆಸರಷ್ಟೆ, ಅದೇನು ಬರೀ ಕಾಡಿನಲ್ಲೇ ಇರುವ ಪಕ್ಷಿಯಲ್ಲ. ದಟ್ಟವಾದ ಕಾಡುಗಳಲ್ಲಿ ಕಾಗೆಗಳು ತುಂಬಾ ವಿರಳವಾಗಿರುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.