ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಕ್ಟೋಬರ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ವೈ ಎವಲ್ಯೂಶನ್ ಈಸ್ ಟ್ರು ?

ವೈ ಎವಲ್ಯೂಶನ್ ಈಸ್ ಟ್ರು ? (ವಿಕಾಸ ನಿಜವೇಕೆ?) ನಾನು ಮೊದಲ ಬಾರಿ ಈ ಪುಸ್ತಕ ನೋಡಿದ್ದು ಲಂಡನ್ ನ ಒಂದು ಲೈಬ್ರರಿಯಲ್ಲಿ. ಜೀವವಿಕಾಸ ನನ್ನ ನೆಚ್ಚಿನ ವಿಷಯ ಗಳಲ್ಲೊಂದು ಹಾಗಾಗಿ ಕೈಗೆತ್ತಿಕೊಂಡೆ. ಮೊದಲ ಪುಟವೆ ಕುತೂಹಲ ಮೂಡಿಸಿ ಓದಿಸಿಕೊಂಡು ಹೋಯಿತು. ಈ ಮೊದಲು ನಾನು ಜೀವವಿಕಾಸದ ಕೆಲವು ಪುಸ್ತಕಗಳನ್ನು ಓದಿದ್ದೆ ಆದರು ಇದು ಕುತೂಹಲ ಮೂಡಿಸಿದ್ದು ಅದರ ಮುನ್ನುಡಿಯ ವಿಷಯಕ್ಕಾಗಿ. ಲೇಖಕರಾದ ಜೆರಿ ಎ ಕಾಯ್ನ್ ತಾವು ಯಾವ ಕಾರಣಕ್ಕಾಗಿ ಈ ಪುಸ್ತಕವನ್ನು ಬರೆಯಬೇಕಾಗಿ ಬಂತು ಎಂದು ವಿವರಿಸುತ್ತ ವಿಕಾಸವಾದದ ಬಗ್ಗೆ ಕೆಲವರಿಗಿರುವ ವಿರೋಧಾಭಿಪ್ರಾಯದ ಬಗ್ಗೆ ಬರೆಯುತ್ತಾರೆ. ಅದು ಹೀಗಿದೆ: ೨೦೦೫ರಲ್ಲಿ ಡೋವರ್ ನ ಪೆನ್ಸಿಲ್ವೇನಿಯಾ ಸ್ಕೂಲ್ ಡಿಸ್ಟ್ರಿಕ್ಟ್ ನ ಆಡಳಿತಗಾರರು ಹೈಸ್ಕೂಲ್ ನ ಜೀವಶಾಸ್ತ್ರ ವಿಷಯಕ್ಕಾಗಿ ಯಾವ ಪಠ್ಯ ವನ್ನು ಆಯ್ಕೆ ಮಾಡಬೇಕು ಎಂದು ಸಭೆ ಸೇರುತ್ತಾರೆ. ಆ ಸಭೆಯಲ್ಲಿ ಕೆಲವು ಧಾರ್ಮಿಕ ಸದಸ್ಯರು ಪ್ರಸ್ತುತ ಪಠ್ಯದಲ್ಲಿರುವ ಡಾರ್ವಿನ್ ವಿಕಾಸವಾದದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಅದರ ಬದಲು ಬೈಬಲಿಕಲ್ ಸೃಷ್ಟಿವಾದದ ಪಠ್ಯವನ್ನು ನಿಯಮಿಸಬೇಕು ಎನ್ನುತ್ತಾರೆ. ಇದು ವಾಗ್ವಾದಕ್ಕೆ ಎಡೆ ಮಾಡಿಕೊಡುತ್ತದೆ. ಕೊನೆಗೆ ಸಭೆ ಒಂದು ನಿರ್ಣಯ ಹೊರಡಿಸುತ್ತದೆ ಅದರಂತೆ ಜೀವಶಾಸ್ತ್ರದ ಶಿಕ್ಷಕರು ತರಗತಿಯಲ್ಲಿ ಈ ಹೇಳಿಕೆಯನ್ನು ಓದಬೇಕಾಗುತ್ತದೆ. "ಡಾರ್ವಿನ್ ವಿಕಾಸವಾದ ಕೇವಲ ವಾದವಷ್ಟೆ ಅದು ನಿಜವಲ್ಲ ಅದಿನ್ನೂ ಪರೀಕ್ಷೆಗೆ ಒ