ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸ್ನೇಹ

' The Hidden Life of Trees' ಜರ್ಮನಿಯಲ್ಲಿ ವೃತ್ತಿಯಿಂದ ಫಾರೆಸ್ಟರ್ ಮತ್ತು ಲೇಖಕರೂ ಆದ Peter Wohlleben ಅವರ ಪುಸ್ತಕ. ಗಿಡ-ಮರಗಳು ಹೇಗೆ ಯೋಚಿಸುತ್ತವೆ, ಹೇಗೆ ಪರಸ್ಪರ ಸಂಭಾಷಿಸುತ್ತವೆ ಎನ್ನುವುದರ ಕುರಿತು ಹೇಳುತ್ತಾರೆ.ಈ ಪುಸ್ತಕವನ್ನು ಓದುತ್ತಾ ಹೋದಂತೆ ಮರ-ಗಿಡಗಳ ಜೀವನ ನಮ್ಮ ಮುಂದೆ ಅನಾವರಣಗೊಳ್ಳುತ್ತಾ ಹೋಗುತ್ತದೆ. ಪುಸ್ತಕ ಓದಿದ ನಂತರ ಮರ-ಗಿಡಗಳ ಬಗ್ಗೆ ನಮ್ಮ ದೃಷ್ಟಿಯೇ ಬದಲಾಗುತ್ತದೆ. ಈ ಪುಸ್ತಕದ ಹೆಚ್ಚುಗಾರಿಕೆಯಿರುವುದು ಅದರ ಸರಳತೆಯಲ್ಲಿ. ಪೀಟರ್ ಅವರು ತಾವು ಹೇಳುವ ಸಂಗತಿಗಳಿಗೆ ವೈಜ್ಞಾನಿಕ ಪುರಾವೆಗಳನ್ನು ಕೊಡುತ್ತಾರಾದರೂ ಅವುಗಳನ್ನೇ ಯಥಾವತ್ತಾಗಿ ಹೇಳುವುದಿಲ್ಲ. ವಿಷಯವನ್ನು ಆದಷ್ಟು ಸರಳವಾಗಿ ಹೇಳುತ್ತಾಹೋಗುತ್ತಾರೆ. ಈ ಪುಸ್ತಕದ ಮೊದಲ ಅಧ್ಯಾಯದ ಕನ್ನಡ ಅನುವಾದ ಇಲ್ಲಿದೆ. ಕೆಲವು ವರ್ಷಗಳ ಹಿಂದೆ ನಾನು ಕಾಡಿನಲ್ಲಿ ನಡೆದಾಡುವಾಗ ಪಾಚಿಯಿಂದ ಆವೃತವಾದ ಕೆಲವು ಕಲ್ಲುಗಳನ್ನು ನೋಡಿದ್ದೆ. ಆ ಕಾಡು ಹಳೆಯ 'ಬೀಚ್' (ಹೊಂಗೆ ಮರ ಕುಟುಂಬಕ್ಕೆ - Fagaceae - ಸೇರಿದ, ಯೂರೋಪಿನ ಒಂದು ಮರ - Fagus sylvatica) ಮರಗಳ ಸಂರಕ್ಷಿತ ಜಾಗವಾಗಿತ್ತು ಮತ್ತು ಅದು ನನ್ನ ನಿರ್ವಹಣೆಯಲ್ಲಿತ್ತು. ನನಗೆ ತಿಳಿದಂತೆ ನಾನು ಹಲವಾರು ಬಾರಿ ಆ ಜಾಗದಲ್ಲಿ ಓಡಾಡಿದ್ದೆ. ಆದರೆ ಆ ಕಲ್ಲುಗಳ ಬಗ್ಗೆ ಯಾವುದೇ ಗಮನ ನೀಡಿರಲಿಲ್ಲ.ಅಂದು ಅದನ್ನು ಸರಿಯಾಗಿ ಗಮನಿಸಿದೆ. ಆ ಕಲ್ಲುಗಳು ವಿಚಿತ್ರ ಆಕಾರದಲ್ಲಿದ್ದವು. ಒಂದ