ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದೊಡ್ಡಕಾಡಿನಲ್ಲೊಂದು ಪುಟ್ಟ ನಾಟಕ

ಕಾಡಿನಲ್ಲಿ ಸುತ್ತಾಡುವಾಗ ಹಲವಾರು ಚಟುವಟಿಕೆಗಳಲ್ಲಿ ಮುಳುಗಿ ಹೋಗಿ ಕೆಲವೊಮ್ಮೆ ನಮಗೆ ಪ್ರಿಯವಾದ ಚಟುವಟಿಕೆಗಳನ್ನೇ ಮರೆತು ಹೋಗಿರುತ್ತೇವೆ. ಉದಾಹರಣೆಗೆ ಒಂದು ವರ್ಷ ನಾಗರಹೊಳೆಯಲ್ಲಿದ್ದಾಗ ಸುಮಾರು ಒಂದು ತಿಂಗಳು ನನಗೆ ಇಷ್ಟವಾದ ಪಕ್ಷಿವೀಕ್ಷಣೆಯನ್ನೇ ಮಾಡಿರಲಿಲ್ಲ. ನೆಲದ ಮೇಲೆ ಬಿದ್ದಿರುವ ಮರದ ಕೊಂಬೆಯನ್ನೋ ಅಥವಾ ಕಲ್ಲನ್ನೋ ಎತ್ತಿ ನೋಡುವುದು, ಹಾಗೆ ಎತ್ತಿ ನೋಡಿದಾಗ ಅಲ್ಲಿರುವ ಬಗೆಬಗೆಯ ಕೀಟಗಳು, ಚೇಳು, ಪುಟ್ಟ ಹಾವುಗಳು, ಕಪ್ಪೆ ಇವುಗಳನ್ನು ಹುಡುಕುವುದರಲ್ಲೇ ಸಮಯ ಹೋಗುತಿತ್ತು. ಇದು ಎಷ್ಟರ ಮಟ್ಟಿಗೆ ಇತ್ತೆಂದರೆ ಮಧ್ಯಾಹ್ನದ ಊಟಕ್ಕೆ ಸರಿಯಾಗಿ ಸಮಯ ಕೊಡದಂತಾಗಿ, ಊಟವನ್ನು ಸ್ವಲ್ಪ ಸ್ವಲ್ಪವಾಗಿ ತುಂಬಾ ಸಮಯದವರೆಗೂ ಮಾಡುವಂತಾಗಿತ್ತು. ಒಂದು ಬಾರಿ ಮಧ್ಯಾಹ್ನದ ಹೊತ್ತುಊಟಕ್ಕೆಂದು ಒಂದು ನೀರು ಹರಿಯುವ ಜಾಗದಲ್ಲಿ ಜೀಪನ್ನು ನಿಲ್ಲಿಸಿದೆವು. ನನ್ನೊಡನಿದ್ದ ಹುಡುಗರು ಇಬ್ಬರು ಊಟಕ್ಕೆಂದು ಹಳ್ಳದ ಒಂದು ಬದಿಗೆ ಹೋದರು. ನಾನು ಸುತ್ತ-ಮುತ್ತ ಏನಾದರು ಕಾಣುತ್ತೆದೆಯೋ ಎಂದು ಹುಡುಕುತ್ತಾ ನನ್ನ ಊಟದ ಡಬ್ಬಿಗೆ ಕೈ ಹಾಕಿದೆ. ಅಲ್ಲೇನಿದೆ!? ಅವತ್ತು ನಾನು ಊಟವನ್ನೇ ತಂದಿರಲಿಲ್ಲ. ನನ್ನ ಡಬ್ಬಿಗೆ ಊಟವನ್ನು ತುಂಬಿದ್ದು ನೆನಪಿತ್ತು, ಆದರೆ ಆ ಡಬ್ಬವನ್ನು ತೆಗೆದುಕೊಳ್ಳಲು ಮರೆತಿದ್ದೆ. ನನ್ನೊಡನಿದ್ದ ಇಬ್ಬರ ಊಟದಲ್ಲಿ ಸ್ಪಲ್ಪ ಕೇಳೋಣವೆಂದುಕೊಂಡೆ, ಆದರೆ ಅವರು ಆಗಲೇ ಊಟ ಶುರು ಮಾಡಿರುತ್ತಾರೆ ಎಂದುಕೊಂಡು ಸುಮ್ಮನಾದೆ. ತಕ್ಷಣವೇ ನ

ನ್ಯೂ ಹೊರೈಜನ್: ಕತ್ತಲ ಲೋಕದ ಅನಾವರಣ

ನ್ಯೂ ಹೊರೈಜನ್‍ ಗಗನ ನೌಕೆ.  Image Credit: NASA ಅಕ್ಟೋಬರ್ 1991, ಯು ಎಸ್ ಪಿ ಎಸ್ (United States Postal Service) ನಾಸಾದ ಸೌರ ಮಂಡಲದ ಅನ್ವೇಷಣೆ ಕುರಿತು ಅಂಚೆಚೀಟಿಯ ಸರಣಿಯನ್ನು ಹೊರತಂದಿತು . ಅದರಲ್ಲಿ ಒಂದು ಚೀಟಿ ಬಹುತೇಕ ಜನರ ಗಮನ ಸೆಳೆಯಿತು ಏಕೆಂದರೆ ಆ ಚೀಟಿ ಪ್ಲೂಟೊ ಕುರಿತಾಗಿತ್ತು ಮತ್ತು ಅದರಲ್ಲಿ “ ಪ್ಲೂಟೊ - ಇನ್ನು ಅನ್ವೇಷಿಸಲಾಗಿಲ್ಲ ” ಎಂಬ ಬರಹವಿತ್ತು . ಇದಕ್ಕೆ ಕಾರಣ ಅಂದಿನವರೆಗು ನಾಸಾ ಹೊರಗಿನ ಸೌರಮಂಡಲವನ್ನು ಅನ್ವೇಷಿಸಲು   ಕಳುಹಿಸಿದ್ದ ಯಾವುದೆ ಆಕಾಶಕಾಯ ಕೂಡ ಪ್ಲೂಟೊ ಸಮೀಪ ಸಾಗಿರಲಿಲ್ಲ !!!

ರಣಹದ್ದುಗಳು

ಒಂದು ಬೆಳಗ್ಗೆ ನಾಗರಹೊಳೆಯ ಹಸಿರು ಗದ್ದೆ ರಸ್ತೆಯಲ್ಲಿ ಕಾಟಿಯೊಂದು ರಸ್ತೆಯ ಬದಿಯಲ್ಲಿ ಸತ್ತು ಬಿದ್ದಿತ್ತು . ಆ ಜಾಗದಲ್ಲಿ ಹೆಣ್ಣು ಹುಲಿಯೊಂದು ತನ್ನೆರಡು ಮರಿಗಳೊಂದಿಗೆ ಓಡಾಡುತ್ತಿದ್ದ ವಿಷಯ ತಿಳಿದಿತ್ತು . ಹಾಗಾಗಿ ಈ ಕೆಲಸ ಆ ಹುಲಿಯದ್ದೇ ಇರಬಹುದು ಎನ್ನಿಸಿತು . ಆದರೆ ಮೊದಲು ಕಂಡಿದ್ದು ಸತ್ತು ಬಿದ್ದಿದ್ದ ಕಾಟಿಯಲ್ಲ , ಅದರ ಸುತ್ತ ನೆರೆದಿದ್ದ ಸುಮಾರು ಮುವತ್ತು ಬಿಳಿ ಎದೆಯ ರಣಹದ್ದುಗಳು (White-rumped Vulture). ಹುಲಿ ತಿನ್ನದೆ ಬಿಟ್ಟಿದ್ದ ಸುಮಾರು ಅರ್ಧದಷ್ಟು ಕಾಟಿಯ ಭಾಗ ರಣಹದ್ದುಗಳಿಗೆ ಭರ್ಜರಿ ಭೋಜನ ಒದಗಿಸಿತ್ತು .