ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಕ್ಟೋಬರ್, 2015 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಾಗೆ

ಕಾಗೆ. ನಮ್ಮೊಡನೆ ಬದುಕುತ್ತಿರುವ ಬುದ್ಧಿವಂತ ಪಕ್ಷಿ. ಪ್ರಸಿದ್ಧ ಪಂಚತಂತ್ರ ಕಥೆಗಳಲ್ಲಿ ಇದರ ಉಲ್ಲೇಖವಿದೆ. ಜಾಢಮಾಲಿ. ಕಾಗೆಗಳಿಲ್ಲದ ನಮ್ಮ ನಗರಗಳು ಈಗಿರುವದಕ್ಕಿಂತ ಅಧ್ವಾನವಾಗಿರುತ್ತಿತ್ತು. ಅವಕಾಶವಾದಿ. ನಗರದ ಗದ್ದಲಕ್ಕೆ ಹೆದರಿ ಕಣ್ಮರೆಯಾದ ಗುಬ್ಬಿಯಂತಲ್ಲದೆ ಸಿಕ್ಕ ಸಣ್ಣ ಅವಕಾಶವನ್ನು ಬಳಸಿಕೊಂಡು ಯಶಸ್ವಿಯಾಗಿ ಬದುಕುತ್ತಿರುವ ಪಕ್ಷಿ. ಒಂದು ಕಾಗೆ ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಒಂದು ಕೃತಕ ಮರದ ಮೇಲೆ ಗೂಡು ಮಾಡಿ ಸುದ್ದಿ ಮಾಡಿತ್ತು. ನಮ್ಮ ಮನೆ ಹತ್ತಿರ ಇದ್ದ ಎರಡು ತೆಂಗಿನ ಮರದಲ್ಲಿನ ಕಾಗೆಗಳಿಗೂ ನನಗೂ ತುಂಬಾ ಜಗಳವಾಗಿತ್ತು. ಯಾವುದೋ ಕಾರಣಕ್ಕೆ ನಾನು ಹೊರಗೆ ಬಂದ ಕ್ಷಣ ಗದ್ದಲ ಮಾಡಿ, ಕುಟುಕಲು ಪ್ರಯತ್ನಿಸುತ್ತಿತ್ತು. ನಾನು ದ್ವೇಷ ತೀರಿಸಿಕೊಳ್ಳಲು ರಾತ್ರಿಯ ಹೊತ್ತು ಅದರ ಗೂಡುಗಳನ್ನೆಲ್ಲಾ ಹಾಳು ಮಾಡಿದ್ದೇನೆ. ನಮ್ಮ ಮನೆ ಕಟ್ಟುವಾಗ ಮರಗಳನ್ನೆಲ್ಲಾ ಕಡಿದು ಹಾಕಿದೆವು. ಇವೆಲ್ಲಾ ನಡೆದು ಹತ್ತು ವರ್ಷಗಳೇ ಆಯ್ತು.ಈಗಲೂ ಕಾಗೆಗಳು ಸುತ್ತ ಮುತ್ತಲಿರುವ ಸಣ್ಣ ಮರಗಳಲ್ಲಿ ಗೂಡು ಮಾಡಿಕೊಂಡಿದೆ. ಈಗಲೂ ಒಮ್ಮೊಮ್ಮೆ ನನ್ನ ನೋಡಿ ಗದ್ದಲ ಮಾಡುತ್ತವೆ. ಇದು ಅದೇ ಕಾಗೆಯೇ? ಕಾಗೆಗೆಷ್ಟು ವಯಸ್ಸು? ನಾವೆಲ್ಲಾ ಕಾಗೆಗಳನ್ನು ನೋಡಿದ ಕ್ಷಣ ಅವೆಲ್ಲಾ ಒಂದೇ ರೀತಿಯದ್ದೆಂದು ತಿಳಿಯುತ್ತೇವೆ. ಆದರೆ ಅದರಲ್ಲೂ ಎರಡು ಜಾತಿಯ ಕಾಗೆಗಳಿವೆ.ಒಂದು ಕತ್ತಿನ ಸುತ್ತ ಬೂದು ಬಣ್ಣದ ಪಟ್ಟಿಯಿರುವ ಊರುಕಾಗೆ (House Crow) ಮತ