ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2018 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕಾಡಿನಲ್ಲಿ ಕಂಡ ನೋಟಗಳು

ಕಾಡಿನಲ್ಲಿ ನಡೆಯುವ ಘಟನೆಗಳೆಲ್ಲವೂ ನಮಗೆ ಪೂರ್ತಿಯಾಗಿ ತೆರೆದುಕೊಳ್ಳುತ್ತದೆ ಎಂದೇನಿಲ್ಲ. ಕೆಲವು ಘಟನೆಗಳ ಒಂದು ಭಾಗವನ್ನಷ್ಟೇ ನಮಗೆ ಗೋಚರವಾಗಿ, ಪೂರ್ತಿಯಾಗಿ ಏನು ನಡೆಯಿತು ಎನ್ನುವುದನ್ನು ನಮ್ಮ ಕಲ್ಪನೆಯಲ್ಲಷ್ಟೇ ಉಳಿದುಬಿಡುತ್ತದೆ. ಗುಂಪಿನ ಬಲದಿಂದ ಕಾಡುನಾಯಿಗಳು ಕಾಟಿಯಂತಹ ದೊಡ್ಡ ಪ್ರಾಣಿಗಳನ್ನೂ ಬೇಟೆಯಾಡಬಲ್ಲವು. ಚಿತ್ರ: ಶ್ರೀಕಾಂತ ಒಂದು ದಿನ ನಾಗರಹೊಳೆಯಿಂದ ಕಾರ್ಮಾಡು ಎನ್ನುವ ಊರಿಗೆ ಹೋಗುವ ಕಾಡಿನ ದಾರಿಯಲ್ಲಿ ನಮ್ಮ ಕೆಲಸವಿತ್ತು. ಆ ದಾರಿಯಿಂದ ಹೊರಟ fire line ಒಂದಿತ್ತು. ಅಲ್ಲಿನ ಗಿಡ ಪೊದೆಗಳನ್ನೆಲ್ಲಾ ಕಡಿದು ದೂರದವರೆಗೂ ಕಾಣುವಂತೆ ಮಾಡಿದ್ದರು. ದೂರದಲ್ಲಿದ್ದ ಒಂದು ಏರಿಯಲ್ಲಿ ಆ fire line ಕಾಡಿನೊಳಗೆ ಕಣ್ಮರೆಯಾಗಿತ್ತು. ನಾನು ನಮ್ಮ ಕೆಲಸ ಮಾಡುತ್ತಲೇ ಆ fire line ನೋಡುತ್ತಾ ಕುಳಿತ್ತಿದ್ದೆ. ಆ ಏರು ಶುರುವಾಗುವ ಜಾಗದಲ್ಲಿ ಒಂದು ಕಾಡುನಾಯಿ ಕಾಡಿನಿಂದ ಹೊರಗೆ ಬಂತು. ಓಡುತ್ತಾ ಬಂದ ಆ ನಾಯಿಯ ಹಿಂದೆ ಕಾಟಿಯೊಂದು ಆ ನಾಯಿಯನ್ನೇ ಅಟ್ಟಿಕೊಂಡು ಬಂತು. ಎರಡು ಮೂರು ಕ್ಷಣಗಳಷ್ಟೇ.. ಒಂದು ಕಡೆಯಿಂದ ಬಂದ ಕಾಡುನಾಯಿ, ಕಾಟಿ ಮತ್ತೊಂದು ಕಡೆ ಮರೆಯಾಯ್ತು. ಅಲ್ಲಿ ಏನು ನಡೆದಿರುಬಹುದು ಎಂದು ಕಲ್ಪಿಸುತ್ತಾ ಕುಳಿತೆ. ಕಾಟಿಯ ಗುಂಪೊಂದಿರಬಹುದು. ಆ ಕಡೆಯೇ ಬಂದ ಕಾಡುನಾಯಿಯ ಗುಂಪೊಂದು ಕಾಟಿಗಳನ್ನು ನೋಡಿ ಸ್ವಲ್ಪ ಕಾಡಲು ನಿರ್ಧರಿಸಿ ಅವುಗಳನ್ನು ಬೆದರಿಸಲು ಪ್ರಯತ್ನಿಸಿರಬಹುದು. ಕಾಡು ನಾಯಿ ಗುಂಪಿನ ಹಲವಾರು ನಾಯಿಗಳಲ್ಲಿ

ಕಣಗಿಲೆ ಗಿಡುಗ-ಪತಂಗ

ಕಣಗಿಲೆ ಅಥವಾ ನಂದಿಬಟ್ಟಲು ಗಿಡವನ್ನು ಬೆಳೆಸಿರುವವರಿಗೆ, ಸಾಮಾನ್ಯವಾಗಿ ಒಂದು ಕಂಬಳಿ ಹುಳು ಈ ಗಿಡಗಳನ್ನು ಅತಿಥೇಯವಾಗಿ ಬಳಸುವುದು ತಿಳಿದಿರುತ್ತದೆ. ನನಗೂ ಈ ಜೀವಿಯ ಪರಿಚಯವಾಗಿದ್ದು ಹೀಗೆ. ನಮ್ಮ ಮನೆಯಲ್ಲಿ ಕುಂಡದಲ್ಲಿ ಬೆಳೆಸಿದ್ದ ನಂದಿಬಟ್ಟಲಿನ ಗಿಡದ ಎಲೆಗಳು ಒಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾದವು. ಹೀಗೆ ದಿಢೀರನೆ ಎಲೆಗಳನ್ನು ಕಳೆದುಕೊಂಡು ಕಾಷ್ಟವಾಗಿದ್ದ ಗಿಡ ನೋಡಿ ಆಶ್ಚರ್ಯ ಆಯಿತು.