ವಿಷಯಕ್ಕೆ ಹೋಗಿ

ಬ್ಲ್ಯಾಕ್ ಕರೆಂಟ್

ಸುಮಾರು ಒಂದೂವರೆ ಶತಮಾನದ ಹಿಂದೆ ಇನ್ನು ವಿಶ್ವದ ಬಹುತೇಕ ಜನರು ಮೇಣದ ಬತ್ತಿಯ ಅಥವಾ ಎಣ್ಣೆ ದೀಪದ ಮೇಲೆ ಅವಲಂಬಿತಾರಗಿದ್ದ ಸಮಯದಲ್ಲಿ ಆಲ್ಟರ್ನೇಟಿಂಗ್ ಕರೆಂಟ್ (ಪರ್ಯಾಯ ವಿದ್ಯುತ್ ಪ್ರವಾಹ)ಅನ್ನು ಕಂಡುಹಿಡಿಯಲಾಯಿತು.
ಇದರಿಂದಾಗಿ ಮಾನವನ ಇತಿಹಾಸದಲ್ಲಿಯೆ ದೊಡ್ಡ ಕ್ರಾಂತಿಯಾಯಿತು ಎನ್ನಬಹುದು. ಈಗಲು ಭೂಮಿಯ ಎಲ್ಲ ಮನೆಗಳಿಗೆ, ಕಛೇರಿಗಳಿಗೆ ಮತ್ತು ಕೈಗಾರಿಕೆಗಳಿಗೆ ಸರಬರಾಜಾಗುವ ವಿದ್ಯುತ್ ಎಂದರೆ ಆಲ್ಟರ್ನೇಟಿಂಗ್ ಕರೆಂಟ್ ಅಥವಾ ಎ ಸಿ.
ಒಂದು ದೊಡ್ಡ ಕೈಗಾರಿಕಾ ಕ್ರಾಂತಿಯನ್ನು ಸೃಷ್ಟಿಸಿದಕ್ಕಾಗಿ ನಾವು ಯಾರಿಗೆ ಥ್ಯಾಂಕ್ಸ್ ಹೇಳಬೇಕು ? ಅದು ನಿಕೊಲ ಟೆಸ್ಲಾಗೆ ಹೇಳಬೇಕು. ಹಾ ... ನಿಮಗೆ ಅಚ್ಚರಿ ಆಗ್ತಿರಬಹುದು ಫಾದರ್ ಆಫ್ ಎಲೆಕ್ಟ್ರಿಕ್ ಏಜ್ ಥಾಮಸ್ ಎಡಿಸನ್ ಅಲ್ಲವೇ? ಎಂದು. ಇಲ್ಲ ಅದು ಟೆಸ್ಲಾ. ನಾವು ಥಾಮಸ್ ಎಡಿಸನ್ ಹೆಸರು ಕೇಳಿದ ಮರುಕ್ಷಣವೇ ನಮಗೆ ನೆನಪು ಬರುವುದು ಎಲೆಕ್ಟ್ರಿಕ್ ಬಲ್ಬ್ ಸೃಷ್ಟಿಕರ್ತನೆಂದು. ಎಡಿಸನ್ ಎಲೆಕ್ಟ್ರಿಕ್ ಬಲ್ಬ್-ಗಳನ್ನು ಕಂಡು ಹಿಡಿಯಲಿಲ್ಲ! 22 ಬೇರೆ ಮಂದಿಯ ಪ್ರಯೋಗಗಳನ್ನು ಉತ್ತಮಗೊಳಿಸಿದನಷ್ಟೆ. ಎಡಿಸನ್ ಬಲ್ಬ್-ಗಳನ್ನು ಜನರಿಗೆ ಕೇವಲ ಮಾರಾಟ ಮಾಡಿದ.

ಟೆಸ್ಲಾ ಮೊದಲಿಗೆ ಎಡಿಸನ್ ಬಳಿ ಕೆಲಸ ಮಾಡುತ್ತಿದ್ದ, ಎಡಿಸನ್ ಡಿ ಸಿ ಮೋಟಾರ್ ಮತ್ತು ಜನರೇಟರ್ ಸಮಸ್ಯೆಯನ್ನು ಟೆಸ್ಲಾ ಸರಿಪಡಿಸಿದ, ಕೆಲಸ ಮಾಡಿದಕ್ಕಾಗಿ ದುಡ್ಡು ಕೇಳಿದಾಗ ಎಡಿಸನ್ ಟೆಸ್ಲಾ ನಿನಗೆ ಅಮೆರಿಕನ್ ಜೋಕೆ ಅರ್ಥ ಆಗುವುದಿಲ್ಲಎಂದು ಹೇಳಿದ. ಇದರಿಂದ ಟೆಸ್ಲಾ ಆ ಕೆಲಸದಿಂದ ಹೊರಗೆ ಬಿದ್ದ. ಯಾರ ಬಳಿ ಅತ್ತಿ ಹೆಚ್ಹು ದುಡ್ಡು ಇದೆಯೋ ಅವನೆ ಸಾಧಕನೆಂದು ಎಡಿಸನ್ ನಂಬಿದ್ದ, ಅವನು ಎಂದಿಗೂ ವಿಜ್ಞಾನಿ ಅಥವಾ ಗಣಿತಜ್ಞನಂತೆ ಇರಲಿಲ್ಲ ಬೇರೆ ಬುದ್ದಿ ಜೀವಿಗಳು ಕೊಡುತ್ತಿದ ವಿಚಾರವನ್ನು ಸಂಗ್ರಹಿಸಿ ಅದರ ಪೇಟೆಂಟ್-ಗಳನ್ನು ಅವನ ಹೆಸರಿಗೆ ತೆಗೆದುಕೊಳ್ಳುತ್ತಿದ್ದನಷ್ಟೆ.
ಟೆಸ್ಲಾ ಯಾವದೇ ಅದ್ಭುತ ವಿಷಯವನ್ನು ಕ೦ಡುಹಿಡಿದರು ಅದನ್ನು ಬರೆದಿಡುವ ಅಭ್ಯಾಸ ಮಾಡಿಕೊಂಡಿರಲಿಲ್ಲ. ಮುಂದೆ ಟೆಸ್ಲಾ  ಆಲ್ಟರ್ನೇಟಿಂಗ್ ಕರೆಂಟ್ ಸಿಸ್ಟಮ್ಸ್ ಬಗ್ಗೆ ಕೆಲಸ ಮಾಡಲು ಶುರು ಮಾಡಿದ, ಇನ್ನೊಂದು ಕಡೆ ಎಡಿಸನ್ ತನ್ನ ಡೈರೆಕ್ಟ್ ಕರೆಂಟ್-ಅನ್ನು ಮಾರಾಟ ಮಾಡಲು ಮುಂದಾದ. ಎಡಿಸನ್- ಡಿ ಸಿ ಸಿಸ್ಟಮ್ ಉಪಯೋಗಿಸಲು ಪ್ರತಿ ಚದರ ಮೈಲಿಗೆ ಒಂದು ವಿದ್ಯುತ್ ಸ್ಥಾವರ ಅಗತ್ಯವಿತ್ತು ಆದರೆ ಟೆಸ್ಲಾ ಎ ಸಿ ಸಿಸ್ಟಮ್ ಕೇವಲ ಸಣ್ಣ ತಂತಿಯಲ್ಲಿ ಆತಿ ಹೆಚ್ಚಿನ ಪ್ರಮಾಣದ ವೋಲ್ಟೇಜ್-ಅನ್ನು ದೂರಕ್ಕೆ ಕಳುಹಿಸಬಹುದಿತ್ತು. ಇದರಿಂದ ಬೇಸರಗೊಂಡ ಎಡಿಸನ್ ಕೆಲವು ಶಾಲಾ ವಿದ್ಯಾರ್ಥಿಗಳಿಗೆ 25 ಸೆಂಟ್-ನಂತೆ ಹಣ ನೀಡಿ ಅಕ್ಕ ಪಕ್ಕ ಮನೆಗಳಲ್ಲಿ, ಬೀದಿಗಳಲ್ಲಿ ಇದ್ದ ನಾಯಿ ಮತ್ತು ಬೆಕ್ಕುಗಳನ್ನು ತರಿಸಿಕೊಂಡು ಅವುಗಳನ್ನು ಸಾರ್ವಜನಿಕರ ಮುಂದೆ ಎ ಸಿ ವಿದ್ಯುತ್ ಇರುವ ತಂತಿಗಳ ಮೇಲೆ ಎಸೆದು ಟೆಸ್ಲಾ ಕಂಡುಹಿದಿರುವುದು ಎಷ್ಟು ಅಪಾಯಕಾರಿ ಎಂದು ಪ್ರದರ್ಶಿಸುತ್ತಿದ್ದ.
ಸುಮಾರು ನೂರು ವರ್ಷಗಳ ಹಿಂದೆಯೇ ಟೆಸ್ಲಾ ವಿಜ್ಞಾನ ಕ್ಷೇತ್ರದಲ್ಲಿ ಕಲ್ಪನೆಯನ್ನು ಮೀರಿದ ಸಾಧನೆಗಳನ್ನು ಮಾಡಿದಾನೆ. ಪ್ರತಿ ಕ್ಷೇತ್ರದಲ್ಲೂ ಇಂತಹ ಕೆಲವರು ಎಲೆಮರೆ ಕಾಯಿಗಳು ಇರುತ್ತವೆ. ಇನ್ನು ಎಷ್ಟೋ ವಿಜ್ಞಾನದ ಪರಿಕಲ್ಪನೆಗಳು ಅಮೇರಿಕಾ ಸರ್ಕಾರದ ಹತ್ತಿರ ಉಳಿದಿವೆ. ತನ್ನ ಇಡಿ ಜೀವಮಾನವನ್ನು ಬರಿ ವಿಜ್ಞಾನಕ್ಕಾಗಿ ಮೀಸಲಿಟ್ಟಿದ್ದ ಟೆಸ್ಲಾ ನ್ಯೂಯಾರ್ಕ್ ಹೋಟೆಲ್ ನಲ್ಲಿ  ಏಕಾಂಗಿಯಾಗಿ ಜನವರಿ 7 1943 ರಂದು ಮರಣ ಹೊಂದುತ್ತಾನೆ.

ಟೆಸ್ಲಾ ಮಾಡಿರುವ ಬೇರೆ ವಿವಿಧ ಸಾಧನೆಗಳು:


1.       ಎಂದಾದರೂ ಮಾರ್ಕೋನಿ ಹೆಸರು ಕೇಳಿದ್ದೀರಾ ? ಹೌದು ರೇಡಿಯೋ ತಂತ್ರಜ್ಞಾನವನ್ನು ಕಂಡು ಹಿಡಿದ ವ್ಯಕ್ತಿ ಇದು ಆತನಿಗೆ ನೊಬೆಲ್ ಪ್ರಶಸ್ತಿ ಕೂಡ ತಂದು ಕೊಟ್ಟಿತು, ಆದರೆ ಇದಕ್ಕು ಮುನ್ನ ಟೆಸ್ಲಾ ಮೊದಲ ಬಾರಿ ಅದನ್ನು ಪ್ರಯೋಗಿಸಿದ್ದು.
2.       1935 ರಲ್ಲಿ ಮೊದಲಿಗೆ ರೇಡಾರ್-ನನ್ನು ರಾಬರ್ಟ್ ವ್ಯಾಟ್ಸನ್, (ವ್ಯಾಟ್ ಎಂದೇ ಪ್ರಖ್ಯಾತಿ) ಕಂಡುಹಿಡಿದ, ಆದರೆ 1917ರಲ್ಲಿ ಟೆಸ್ಲಾ ಈ ವಿಷಯವನ್ನು ಕಂಡು ಹಿಡಿದಿದ್ದ.
3.       ಮೊದಲು ನಯಾಗರ ಫಾಲ್ಸ್ ನಲ್ಲಿ ಹೈಡ್ರೋ ಎಲೆಕ್ಟ್ರಿಕ್ ಪ್ಲಾಂಟ್ ಮಾಡಿದ್ದು ಟೆಸ್ಲಾ, ಇಡಿ ವಿಶ್ವಕ್ಕೆ ಈ ತರದ ಒಂದು ಶಕ್ತಿ ಉತ್ಪಾದಿಸಬಹುದು ಎಂದು ತೋರಿಸಿಕೊಟ್ಟ
4.       ಇಂದಿನ ವಯರ್ಲೆಸ್ ಕಮ್ಯುನಿಕೇಷನ್ ಮೊದಲು ಆರಂಭಿಸಿದು ಟೆಸ್ಲಾ
5.       ಟೆಸ್ಲಾ ಒಟ್ಟು ಎಂಟು ಭಾಷೆಗಳನ್ನು ಮಾತನಾಡುತ್ತಿದ್ದ ಸರ್ಬಿಯನ್, ಇಂಗ್ಲಿಷ್, ಝೆಕ್, ಜರ್ಮನ್, ಫ್ರೆಂಚ್, ಹಂಗೇರಿಯನ್, ಇಟಾಲಿಯನ್ ಮತ್ತು ಲ್ಯಾಟಿನ್
6.       ಇಂದಿನ ಆಧುನಿಕ ಎಲೆಕ್ಟ್ರಿಕ್ ಮೋಟಾರ್ ಕೂಡ ಟೆಸ್ಲಾ ಕೊಡುಗೆ ನೀಡಿದ್ದು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.