ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಇಲ್ಲಿಗೇಕೆ ಬಂತು? ದಾರಿತಪ್ಪಿ ಬಂತು!

ಒಂದು ದಿನ ರಾತ್ರಿ ಎಂಟುಗಂಟೆ ಸಮಯದಲ್ಲಿ ಹೊರಗೆ ಹಾಕಿದ್ದ LED ಬಲ್ಬ್‌ನ ಸಮೀಪ ಎನೋ ಪಟಪಟನೆ ಸದ್ದಾಯಿತು. ಸಾಮಾನ್ಯವಾಗಿ ಆ ಹೊತ್ತಿಗೆ ಯಾವುದೋ ಪತಂಗ ಬಂದಿರಬಹುದೆಂದು ತಿಳಿದೆ. ಮಳೆಗಾಲದ ದಿನಗಳಲ್ಲಂತೂ ಎರಡು-ಮೂರು ದಿನಗಳಿಗೊಮ್ಮೆ ನಾನು ಅದುವರೆವಿಗೂ ನೋಡದ ಪತಂಗಗಳು ಇದೇ ದೀಪದ ಅಡಿಯಲ್ಲಿ ಪ್ರತ್ಯಕ್ಷವಾಗುತ್ತಿತ್ತು. ಹೊರಗೆ ಬಂದು ನೋಡಿದಾಗ ದೀಪದ ಹತ್ತಿರ ರೆಕ್ಕೆ ಬಡಿಯುತ್ತಿದ್ದ ಕೀಟವೋ ಮತ್ತೇನೋ ಒಂದರ ವೇಗಕ್ಕೆ ಅದರ ರೆಕ್ಕೆಗಳೇ ಮುರಿಯಬಹುದು ಎಂದೆನ್ನಿಸಿ ದೀಪದ ಸ್ವಿಚ್ ಆರಿಸಿದೆ, ನಿಶ್ಯಬ್ದವಾಯಿತು. ಸ್ವಲ್ಪ ಹೊತ್ತಿನ ನಂತರ ಮತ್ತೆ ದೀಪ ಹಾಕಿದಾಗ ಪಕ್ಕದಲ್ಲಿ ಕುಳಿತಿದ್ದುದು ಪತಂಗವೆಂದೇ ತಿಳಿದೆ. ಹತ್ತಿರದಿಂದ ಗಮನಿಸಿದಾಗ ಅದೊಂದು ಚಿಟ್ಟೆಯಿರಬಹುದು ಎಂದೆನ್ನಿಸಿತು. ಪತಂಗಗಳು ಮತ್ತು ಚಿಟ್ಟೆಗಳು ಒಂದೇ ಗುಂಪಿಗೆ ಸೇರಿದ ಜೀವಿಗಳಾದರೂ ಅವುಗಳ‌ ಮಧ್ಯೆ ಕೆಲವೊಂದು ವ್ಯತ್ಯಾಸಗಳಿವೆ. ಪತಂಗಗಳು ನಿಶಾಚರಿಗಳಾದರೆ, ಚಿಟ್ಟೆಗಳು ಹಗಲಿನ ಅವಧಿಯಲ್ಲಿ ಚಟುವಟಿಕೆಯಿಂದಿರುತ್ತವೆ. ಪತಂಗಗಳು ಕೂರುವಾಗ ಅವುಗಳ ರೆಕ್ಕೆಗಳನ್ನು ಹರಡಿಕೊಂಡು ಕೂರುತ್ತವೆ. ಚಿಟ್ಟೆಗಳು ತಮ್ಮ ರೆಕ್ಕೆಗಳನ್ನು ಮುಚ್ಚಿಕೊಂಡು ಕೂರುತ್ತವೆ. ಪತಂಗಗಳದ್ದು ಕೂದಲಿನಿಂದ ದಟ್ಟವಾಗಿರುವಂತೆ ಕಾಣುವ ಚಿಕ್ಕ ಆಂಟೆನಾಗಳಾದರೆ, ಚಿಟ್ಟೆಗಳದ್ದು ಸಪೂರವಾದ ಉದ್ದ ಆಂಟೆನಾಗಳು. ಹೆಚ್ಚಿನ ಪತಂಗಗಳ ಬಣ್ಣ ಪೇಲವವಾಗಿದ್ದರೆ, ಚಿಟ್ಟೆಗಳದ್ದು ಪ್ರಜ್ವಲಿಸುವ ಗಾಢ ಬಣ್ಣ. ಹೆಚ್ಚಿನ ಪತಂಗಗಳು ...