ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸ್ನೇಹ

 ' The Hidden Life of Trees' ಜರ್ಮನಿಯಲ್ಲಿ ವೃತ್ತಿಯಿಂದ ಫಾರೆಸ್ಟರ್ ಮತ್ತು ಲೇಖಕರೂ ಆದ Peter Wohlleben ಅವರ ಪುಸ್ತಕ. ಗಿಡ-ಮರಗಳು ಹೇಗೆ ಯೋಚಿಸುತ್ತವೆ, ಹೇಗೆ ಪರಸ್ಪರ ಸಂಭಾಷಿಸುತ್ತವೆ ಎನ್ನುವುದರ ಕುರಿತು ಹೇಳುತ್ತಾರೆ.ಈ ಪುಸ್ತಕವನ್ನು ಓದುತ್ತಾ ಹೋದಂತೆ ಮರ-ಗಿಡಗಳ ಜೀವನ ನಮ್ಮ ಮುಂದೆ ಅನಾವರಣಗೊಳ್ಳುತ್ತಾ ಹೋಗುತ್ತದೆ. ಪುಸ್ತಕ ಓದಿದ ನಂತರ ಮರ-ಗಿಡಗಳ ಬಗ್ಗೆ ನಮ್ಮ ದೃಷ್ಟಿಯೇ ಬದಲಾಗುತ್ತದೆ. ಈ ಪುಸ್ತಕದ ಹೆಚ್ಚುಗಾರಿಕೆಯಿರುವುದು ಅದರ ಸರಳತೆಯಲ್ಲಿ. ಪೀಟರ್ ಅವರು ತಾವು ಹೇಳುವ ಸಂಗತಿಗಳಿಗೆ ವೈಜ್ಞಾನಿಕ ಪುರಾವೆಗಳನ್ನು ಕೊಡುತ್ತಾರಾದರೂ ಅವುಗಳನ್ನೇ ಯಥಾವತ್ತಾಗಿ ಹೇಳುವುದಿಲ್ಲ. ವಿಷಯವನ್ನು ಆದಷ್ಟು ಸರಳವಾಗಿ ಹೇಳುತ್ತಾಹೋಗುತ್ತಾರೆ. ಈ ಪುಸ್ತಕದ ಮೊದಲ ಅಧ್ಯಾಯದ ಕನ್ನಡ ಅನುವಾದ ಇಲ್ಲಿದೆ. ಚಿತ್ರ: © ಶ್ರೀಕಾಂತ ಕೆಲವು ವರ್ಷಗಳ ಹಿಂದೆ ನಾನು ಕಾಡಿನಲ್ಲಿ ನಡೆದಾಡುವಾಗ ಪಾಚಿಯಿಂದ ಆವೃತವಾದ ಕೆಲವು ಕಲ್ಲುಗಳನ್ನು ನೋಡಿದ್ದೆ. ಆ ಕಾಡು ಹಳೆಯ 'ಬೀಚ್' (ಹೊಂಗೆ ಮರ ಕುಟುಂಬಕ್ಕೆ - Fagaceae - ಸೇರಿದ, ಯೂರೋಪಿನ ಒಂದು ಮರ - Fagus sylvatica) ಮರಗಳ ಸಂರಕ್ಷಿತ ಜಾಗವಾಗಿತ್ತು ಮತ್ತು ಅದು ನನ್ನ ನಿರ್ವಹಣೆಯಲ್ಲಿತ್ತು. ನನಗೆ ತಿಳಿದಂತೆ ನಾನು ಹಲವಾರು ಬಾರಿ ಆ ಜಾಗದಲ್ಲಿ ಓಡಾಡಿದ್ದೆ. ಆದರೆ ಆ ಕಲ್ಲುಗಳ ಬಗ್ಗೆ ಯಾವುದೇ ಗಮನ ನೀಡಿರಲಿಲ್ಲ.ಅಂದು ಅದನ್ನು ಸರಿಯಾಗಿ ಗಮನಿಸಿದೆ. ಆ ಕಲ್ಲುಗಳು ವಿಚಿತ್ರ ...

ಕಾಡಿನಲ್ಲಿ ಕಂಡ ನೋಟಗಳು

 ಕಾಡಿನಲ್ಲಿ ನಡೆಯುವ ಘಟನೆಗಳೆಲ್ಲವೂ ನಮಗೆ ಪೂರ್ತಿಯಾಗಿ ತೆರೆದುಕೊಳ್ಳುತ್ತದೆ ಎಂದೇನಿಲ್ಲ. ಕೆಲವು ಘಟನೆಗಳ ಒಂದು ಭಾಗವನ್ನಷ್ಟೇ ನಮಗೆ ಗೋಚರವಾಗಿ, ಪೂರ್ತಿಯಾಗಿ ಏನು ನಡೆಯಿತು ಎನ್ನುವುದನ್ನು ನಮ್ಮ ಕಲ್ಪನೆಯಲ್ಲಷ್ಟೇ ಉಳಿದುಬಿಡುತ್ತದೆ. ಗುಂಪಿನ ಬಲದಿಂದ ಕಾಡುನಾಯಿಗಳು ಕಾಟಿಯಂತಹ ದೊಡ್ಡ ಪ್ರಾಣಿಗಳನ್ನೂ ಬೇಟೆಯಾಡಬಲ್ಲವು.  ಚಿತ್ರ: © ಶ್ರೀಕಾಂತ ಒಂದು ದಿನ ನಾಗರಹೊಳೆಯಿಂದ ಕಾರ್ಮಾಡು ಎನ್ನುವ ಊರಿಗೆ ಹೋಗುವ ಕಾಡಿನ ದಾರಿಯಲ್ಲಿ ನಮ್ಮ ಕೆಲಸವಿತ್ತು. ಆ ದಾರಿಯಿಂದ ಹೊರಟ fire line ಒಂದಿತ್ತು. ಅಲ್ಲಿನ ಗಿಡ ಪೊದೆಗಳನ್ನೆಲ್ಲಾ ಕಡಿದು ದೂರದವರೆಗೂ ಕಾಣುವಂತೆ ಮಾಡಿದ್ದರು. ದೂರದಲ್ಲಿದ್ದ ಒಂದು ಏರಿಯಲ್ಲಿ ಆ fire line ಕಾಡಿನೊಳಗೆ ಕಣ್ಮರೆಯಾಗಿತ್ತು. ನಾನು ನಮ್ಮ ಕೆಲಸ ಮಾಡುತ್ತಲೇ ಆ fire line ನೋಡುತ್ತಾ ಕುಳಿತ್ತಿದ್ದೆ. ಆ ಏರು ಶುರುವಾಗುವ ಜಾಗದಲ್ಲಿ ಒಂದು ಕಾಡುನಾಯಿ ಕಾಡಿನಿಂದ ಹೊರಗೆ ಬಂತು. ಓಡುತ್ತಾ ಬಂದ ಆ ನಾಯಿಯ ಹಿಂದೆ ಕಾಟಿಯೊಂದು ಆ ನಾಯಿಯನ್ನೇ ಅಟ್ಟಿಕೊಂಡು ಬಂತು. ಎರಡು ಮೂರು ಕ್ಷಣಗಳಷ್ಟೇ.. ಒಂದು ಕಡೆಯಿಂದ ಬಂದ ಕಾಡುನಾಯಿ, ಕಾಟಿ ಮತ್ತೊಂದು ಕಡೆ ಮರೆಯಾಯ್ತು. ಅಲ್ಲಿ ಏನು ನಡೆದಿರುಬಹುದು ಎಂದು ಕಲ್ಪಿಸುತ್ತಾ ಕುಳಿತೆ. ಕಾಟಿಯ ಗುಂಪೊಂದಿರಬಹುದು. ಆ ಕಡೆಯೇ ಬಂದ ಕಾಡುನಾಯಿಯ ಗುಂಪೊಂದು ಕಾಟಿಗಳನ್ನು ನೋಡಿ ಸ್ವಲ್ಪ ಕಾಡಲು ನಿರ್ಧರಿಸಿ ಅವುಗಳನ್ನು ಬೆದರಿಸಲು ಪ್ರಯತ್ನಿಸಿರಬಹುದು. ಕಾಡು ನಾಯಿ ಗುಂಪಿನ ಹಲವಾರ...

ಕಣಗಿಲೆ ಗಿಡುಗ-ಪತಂಗ

ಕಣಗಿಲೆ ಅಥವಾ ನಂದಿಬಟ್ಟಲು ಗಿಡವನ್ನು ಬೆಳೆಸಿರುವವರಿಗೆ, ಸಾಮಾನ್ಯವಾಗಿ ಒಂದು ಕಂಬಳಿ ಹುಳು ಈ ಗಿಡಗಳನ್ನು ಅತಿಥೇಯವಾಗಿ ಬಳಸುವುದು ತಿಳಿದಿರುತ್ತದೆ. ನನಗೂ ಈ ಜೀವಿಯ ಪರಿಚಯವಾಗಿದ್ದು ಹೀಗೆ. ನಮ್ಮ ಮನೆಯಲ್ಲಿ ಕುಂಡದಲ್ಲಿ ಬೆಳೆಸಿದ್ದ ನಂದಿಬಟ್ಟಲಿನ ಗಿಡದ ಎಲೆಗಳು ಒಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾದವು. ಹೀಗೆ ದಿಢೀರನೆ ಎಲೆಗಳನ್ನು ಕಳೆದುಕೊಂಡು ಕಾಷ್ಟವಾಗಿದ್ದ ಗಿಡ ನೋಡಿ ಆಶ್ಚರ್ಯ ಆಯಿತು.

ಕಾಮನ್ ಬ್ಯಾಂಡೆಡ್ ಆಲ್ (Hasora chromus)

ಹೊಂಗೆ ಮರ ತನ್ನ ಎಲೆಗಳನ್ನು ಉದುರಿಸಿ ಮತ್ತೆ ಚಿಗುರುವುದನ್ನು ನೋಡಿದಾಗ ನನ್ನ ನೆನಪು ಏಳೆಂಟು ವರ್ಷಗಳ ಹಿಂದೆ ಸರಿಯುತ್ತದೆ. ನಾವು ಹೊಂಗೆ ಸಸಿಯನ್ನು ನೆಟ್ಟು ಎರಡು ಮೂರು ವರ್ಷವಾಗಿತ್ತು ಅದು ಸಣ್ಣ ಮರವಾಗಿ ಬೆಳೆದಿತ್ತು. ನವಂಬರ್ ಅಥವಾ ಡಿಸೆಂಬರ್ ತಿಂಗಳಲ್ಲಿ ಎಲೆಯುದುರಿಸಿ ಹೊಸ ಎಲೆಗಳನ್ನು ತಾಳುತಿತ್ತು. ಹೊಸ ಎಲೆಗಳು ಮೊದಲು ಕೆಂಪು ಬಣ್ಣದಲ್ಲಿದ್ದು ಬೆಳೆದಂತೆಲ್ಲ ತೆಳು ಹಸಿರು ಬಣ್ಣಕ್ಕೆ ತಿರುಗುತ್ತವೆ. ದೂರದಿಂದ ನೋಡಲು ತುಂಬಾ ಆಕರ್ಷಕವಾಗಿರುತ್ತದೆ. ಈ ಸಮಯದಲ್ಲಿ ಇದ್ದಕ್ಕಿದಂತೆ ಮರದ ತುಂಬೆಲ್ಲ ಒಂದು ಚಿಟ್ಟೆಯ ಮರಿಗಳು ಕಾಣಿಸಿಕೊಂಡವು.

ಚಿಪ್ಪು ಕೀಟಗಳು

ಸುಮಾರು ಹದಿನೈದು ವರ್ಷಗಳ ಹಿಂದೆ ನಮ್ಮ ಮನೆಯಲ್ಲಿ, ಕುಂಡಗಳಲ್ಲಿ ಹೂವಿನ ಗಿಡಗಳನ್ನು ಬೆಳಿಸಿದ್ದೆವು. ಇದರಲ್ಲಿ ನಂದಿಬಟ್ಟಲು ಗಿಡವು ಸೇರಿತ್ತು. ಮೂರು ಗಿಡಗಳಿಂದ ಒಂದಷ್ಟು ಹೂವುಗಳು ಸಿಗುತ್ತಿತ್ತು. ಕೆಲವು ವರ್ಷಗಳೊ ಅಥವಾ ತಿಂಗಳುಗಳೊ ಸರಿಯಾಗಿ ನೆನಪಿಲ್ಲ ಕಳೆದಿತ್ತು, ನಂದಿಬಟ್ಟಲಿನ ಗಿಡದ ಟೊಂಗೆಯ ಮೇಲೆ ಕಂದು ಬಣ್ಣದ ಗುಳ್ಳೆಗಳು ಮೂಡ ತೊಡಗಿದವು. ಗಿಡಕ್ಕೆ ಏನೊ ಖಾಹಿಲೆ ಬಂದಿದೆ ಎಂದುಕೊಂಡೆ. ಆ ಗುಳ್ಳೆಗಳನ್ನು ಕೀಳಲು ಪ್ರಯತ್ನ ಪಟ್ಟರು ಸಾಧ್ಯವಾಗಲಿಲ್ಲ. ಈ ಗುಳ್ಳೆಗಳು ಹೆಚ್ಚಿದಂತೆಲ್ಲ ಗಿಡದ ಮೇಲೆ ಗೊದ್ದಗಳು ಓಡಾಡಲು ಶುರುಮಾಡಿದವು. ಕೆಲವೊಮ್ಮೆ ಗುಂಪಾಗಿ ಗಿಡದ ತುದಿಗಳಲ್ಲಿ ಅಥವಾ ಎಲೆಗಳ ಮರೆಯಲ್ಲಿ ತಟಸ್ಥ ವಾಗಿ ಕುಳಿತಿರುತ್ತಿದ್ದವು. ಹೀಗೆ ಅನೇಕ ದಿನಗಳವರೆಗು ಇದ್ದ ಇವನ್ನು ಕ್ರಮೇಣ ನಾನು ಮರೆತು ಬಿಟ್ಟೆ. 

ಜೋಳಿಗೆ ಹುಳು

ನಾವು ನಮ್ಮ ಮನೆಯ ಗೋಡೆ ಅಥವಾ ಕಾಂಪೌಡಿನ ಮೇಲೆ ಒಂದುರೀತಿ ಚಿಕ್ಕದಾಗಿ ಕಸ ಒಗ್ಗೂಡಿರುವುದನ್ನು ನೋಡಿರುತ್ತೇವೆ. ಇದನ್ನು ಬಹುತೇಕ ಜನ ಕಸವೆಂದು ಉಪೇಕ್ಷಿಸುವುದೆ ಹೆಚ್ಚು. ಆದರೆ ಸ್ವಲ್ಪ ತಾಳ್ಮೆಯಿಂದ ಸೂಕ್ಷ್ಮವಾಗಿ ಗಮನಿಸಿದರೆ ಅದೊಂದು ಜೀವಿಯೆಂದು ತಿಳಿಯುತ್ತದೆ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.

ಇ-ತ್ಯಾಜ್ಯ ನಿರ್ವಹಣೆ ಹಾಗೂ ವಿಲೇವಾರಿ

ವಿಶ್ವ ಇಂದು ಪ್ರಗತಿಯತ್ತ ದಾಪುಗಾಲು ಇರಿಸುತ್ತಾ ವೇಗವಾಗಿ ಪಯಣ ಮಾಡುತ್ತಿದೆ. ಮನುಷ್ಯನಿಗೆ ಅವಶ್ಯಕವಾದ ಸಹಸ್ರಾರು ವಿದದ ಉಪಕರಣಗಳು ಮಾರುಕಟ್ಟೆ ಪ್ರವೇಶಿಸಿವೆ. ಎಲೆಕ್ಟ್ರಾನಿಕ್ಸ್ ಉಪಕರಣಗಳಳ್ಲಿ ಪ್ಲಾಸ್ಟಿಕ್ ಬಳಕೆ ಅನಿವಾರ್ಯವಾಗಿ ಪರಿಣಮಿಸಿದೆ. ಜಾಗತೀಕರಣ, ಆಧುನೀಕರಣ, ತಂತ್ರಜ್ಞಾನದ ಶೀಘ್ರ ಬೆಳವಣಿಗೆ ಆದ ನಂತರ ಭಾರತದಲ್ಲಿ ಇ-ತ್ಯಾಜ್ಯದ ಪ್ರಮಾಣ ತ್ವರಿತಗತಿಯಲ್ಲಿ ಹೆಚ್ಚಾಗುತ್ತಿದೆ, ಸಿಲಿಕಾನ್ ಸಿಟಿಯಂದೇ ಹೆಸರಾದ ಬೆಂಗಳೂರು ಒಂದರಲ್ಲೇ ಪ್ರತಿವರ್ಷ 76,000 ಟನ್ ಇ-ತ್ಯಾಜ್ಯ ಉತ್ಪತ್ತಿಯಾಗುತ್ತಿದೆ ಎಂದು ಅಂದಾಜು ಮಾಡಲಾಗಿದೆ. ಅನಾವಶ್ಯಕ ಹಾಗೂ ನಿರುಪಯುಕ್ತ ಇ-ತ್ಯಾಜ್ಯವನ್ನು ವಿಲೇವಾರಿ ಮಾಡವಲ್ಲಿ ವಿಶ್ವ ಈಗ ಸವಾಲು ಎದುರಿಸುತ್ತಿದೆ.

ವಸ್ತುಗಳ ಅಂತರ್ಜಾಲ

ಏನಿದು ವಸ್ತುಗಳ ಅಂತರ್ಜಾಲ ? ಸುಮಾರು ಒಂದೆರಡು ದಶಕದಿಂದ ನಮಗೆ ಅಂತರ್ಜಾಲವನ್ನು ಬಳಸಿ ಗೊತ್ತು . ಮೊದಲು ಅಂತರ್ಜಾಲ ಅಗತ್ಯವಿದ್ದದ್ದು ಸಂವಹನೆಗಾಗಿ ಮಾತ್ರ . ಮುಂದೆ ಅಂತರ್ಜಾಲ ವಾಣಿಜ್ಯ ಉದ್ದೇಶಕ್ಕಾಗಿ ಬಳಸಲು ಆರಂಭವಾದಾಗ ಮತ್ತು ವಯಕ್ತಿಕ ಹಾಗು ಮೊಬೈಲ್ ಕಂಪ್ಯೂಟರ್ ಗಳು ಅಂತರ್ಜಾಲಕ್ಕೆ ಸಂಪರ್ಕಗೊಂಡ ನಂತರ ನಮ್ಮ ಬಹುತೇಕ ಕೆಲಸ ಕಾರ್ಯಗಳು ಅಂತರ್ಜಾಲದ ಮೂಲಕ ನಡೆಯುತ್ತಿವೆ .

'ಕುಟುರ ಮತ್ತು ಕುಟಿಗ'ರ ಜಗಳ

ಶ್ರೀಕಾಂತ ಬರೆದಿರುವ ಕುಟುರ ಪಕ್ಷಿ ಮತ್ತು ಮೈನಾ ಪಕ್ಷಿಯ ಜಗಳ ಓದಿದ ನಂತರ ನನಗೂ ಇಂತಹದೇ ಇನ್ನೊಂದು ಘಟನೆ ನೆನಪಿಗೆ ಬಂತು. ಸುಮಾರು ಐದಾರು ವರ್ಷಗಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ಕಂಪೆನಿ ಒಂದು ಟೆಕ್‌ಪಾರ್ಕ್‌‍‌ನಲ್ಲಿ ಕೆಂಗೇರಿ ಬಳಿ ಮೈಸೂರು ರಸ್ತೆಯಲ್ಲಿತ್ತು. ಆ ಟೆಕ್‌ಪಾರ್ಕ್ ಮೊದಲು ಒಂದು ತೋಟವಾಗಿತ್ತು. ಆ ತೋಟವನ್ನು ಸಂಪೂರ್ಣವಾಗಿ ನೆಲಸಮ ಮಾಡದೆ ಕೆಲವು ಮರಗಳನ್ನು ಹಾಗೆ ಉಳಿಸಿಕೊಳ್ಳಲಾಗಿತ್ತು. ಹಾಗಾಗಿ ಆ ಟೆಕ್‌ಪಾರ್ಕ್ ಇತರ ಟೆಕ್‌ಪಾರ್ಕ್‌ಗಳಂತೆ ಕೃತಕವಾಗಿರದೆ ನೈಜವಾಗಿತ್ತು.