ವಿಷಯಕ್ಕೆ ಹೋಗಿ

ವಸ್ತುಗಳ ಅಂತರ್ಜಾಲ


ಏನಿದು ವಸ್ತುಗಳ ಅಂತರ್ಜಾಲ?
ಸುಮಾರು ಒಂದೆರಡು ದಶಕದಿಂದ ನಮಗೆ ಅಂತರ್ಜಾಲವನ್ನು ಬಳಸಿ ಗೊತ್ತು. ಮೊದಲು ಅಂತರ್ಜಾಲ ಅಗತ್ಯವಿದ್ದದ್ದು ಸಂವಹನೆಗಾಗಿ ಮಾತ್ರ. ಮುಂದೆ ಅಂತರ್ಜಾಲ ವಾಣಿಜ್ಯ ಉದ್ದೇಶಕ್ಕಾಗಿ ಬಳಸಲು ಆರಂಭವಾದಾಗ ಮತ್ತು ವಯಕ್ತಿಕ ಹಾಗು ಮೊಬೈಲ್ ಕಂಪ್ಯೂಟರ್ ಗಳು ಅಂತರ್ಜಾಲಕ್ಕೆ ಸಂಪರ್ಕಗೊಂಡ ನಂತರ ನಮ್ಮ ಬಹುತೇಕ ಕೆಲಸ ಕಾರ್ಯಗಳು ಅಂತರ್ಜಾಲದ ಮೂಲಕ ನಡೆಯುತ್ತಿವೆ.
ಹೀಗೆ ನಮ್ಮ ದೈನಂದಿನ ಕೆಲಸಗಳು ಅಂತರ್ಜಾಲದ ಮೇಲೆ ಅವಲಂಬಿತವಾಗಿರುವುದನ್ನು ಗಮನಿಸಿದರೆ ಅಚ್ಚರಿಯಾಗುತ್ತದೆ.
ಅಂತರ್ಜಾಲವನ್ನು ಬಳಸುವಾಗ ಒಂದು ತುದಿಯಲ್ಲಿ ನಾವು ಅಂದರೆ ಬಳಕೆದಾರರು ಇರುತ್ತೇವೆ. ಆದರೆ ನಮ್ಮ ಮಧ್ಯಸ್ಥಿಕೆ ಇಲ್ಲದೆ ಕೇವಲ ವಸ್ತುಗಳೆ ಅಂತರ್ಜಾಲದ ಮೂಲಕ ಒಂದಕ್ಕೊಂದು ಸಂವಹನ ಮಾಡಿಕೊಂಡರೆ ಅದು ವಸ್ತುಗಳ ಅಂತರ್ಜಾಲವಾಗುತ್ತದೆ. ವಸ್ತುಗಳ ಅಂತರ್ಜಾಲದ ವ್ಯಾಖ್ಯಾನ ಹೀಗಿದೆ: "ಇದೊಂದು ಭೌತಿಕ ವಸ್ತುಗಳನ್ನು, ವಾಹನಗಳನ್ನು, ಕಟ್ಟಡಗಳನ್ನು, ಮನೆಗಳನ್ನು ಇಲೆಕ್ಟ್ರಾನಿಕ್ಸ್, ಸೆನ್ಸರ್ ನಂತ ವಸ್ತುಗಳನ್ನು ಒಳಗೊಂಡ ಜಾಲ. ಇದರಿಂದಾಗಿ ವಸ್ತುಗಳು ತಮ್ಮ ಮಧ್ಯೆ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಬಹುದು.” ಜಾಲದಲ್ಲಿ ಜಾಣ ಎಂಬೆಡೆಡ್ ಸಾಧನಗಳು ಸಂಪರ್ಕಗೊಳ್ಳುವುದರಿಂದ ಸ್ವಯಂಚಾಲನ ತಂತ್ರವನ್ನು ಎಲ್ಲ ಕ್ಷೇತ್ರದಲ್ಲಿ ಸಾಧಿಸಬಹುದಾಗಿದೆ.
ಇಲ್ಲಿ ವಸ್ತುಗಳು ಎಂದರೆ ಯಂತ್ರಾಂಶದ, ತಂತ್ರಾಂಶದ, ದತ್ತಾಂಶದ ಮತ್ತು ಸೇವೆಗಳ ಬೇರ್ಪಡಿಸಲಾಗದ ಸಮ್ಮಿಶ್ರಣ.
ಅನ್ವಯ
ಮೊದಲೆ ತಿಳಿಸಿದಂತೆ ತಂತ್ರಜ್ಞಾನವನ್ನು ಬಹುತೇಕ ಎಲ್ಲ ಕ್ಷೇತ್ರದಲ್ಲೂ ಅನ್ವಯಿಸಬಹುದು. ಅದರ ಎರಡು ಉದಾಹರಣೆ ಲ್ಲಿದೆ.
ಸಾರಿಗೆ
ನಮ್ಮ ವಾಹನಗಳನ್ನು ಅಂತರ್ಜಾಲಕ್ಕೆ ಸಂಪರ್ಕಗೊಳಿಸುವುದರಿಂದ ಅವುಗಳನ್ನು ಜಾಣ ಟ್ರಾಫಿಕ್ ನಿಯಂತ್ರಣ, ಜಾಣ ವಾಹನ ನಿಲುಗಡೆ, ಜಾಣ ರಸ್ತೆಶುಲ್ಕ ವ್ಯವಸ್ಥೆ, ವಾಹನ ಸ್ವಯಂ ನಿಯಂತ್ರಣ ಇಂತಹದನ್ನು ಸಾಧಿಸಬಹುದು. ಇದರಿಂದ ರಸ್ತೆ ಅಪಘಾತ, ವಾಹನ ಕಳುವು ತಡೆಗಟ್ಟಲು ಸಾಧ್ಯ. ಅಲ್ಲದೆ ಕಾರ್ಗೋ ಮತ್ತು ಫ್ಲೀಟ್ ನಿರ್ವಹಣೆಯಲ್ಲಿ ವಾಹನಗಳ ಮೇಲೆ ಸತತವಾಗಿ ನಿಗ ಇರಿಸಬಹುದು.
ಕೃಷಿಕ್ಷೇತ್ರ
ವಸ್ತುಗಳ ಅಂತರ್ಜಾಲ ಕೃಷಿಕ್ಷೇತ್ರದಲ್ಲಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಮಳೆ ಮಾಪನ, ಮಣ್ಣಿನ ತೇವಾಂಶ, ಸಾರತೆ, ಗಾಳಿಯ ವೇಗ ಮತ್ತು ದಿಕ್ಕು, ವಾತಾವರಣದ ಉಷ್ಣಾಂಶ ಇವುಗಳನ್ನು ನಿಜ ಸಮಯದಲ್ಲಿ ಅಳೆಯಬಹುದು. ಇದು ಬೆಳೆಗಳಿಗೆ ಅವಶ್ಯ ಸಮಯದಲ್ಲಿ ಅವಶ್ಯ ಪೋಷಕಾಂಶಗಳನ್ನು ಮತ್ತು ರಕ್ಷಣೆ ನೀಡಲು ಸಹಕರಿಸುತ್ತದೆ. ಇದರಿಂದಾಗಿ ಬೆಳೆಗಳನ್ನು ಉಳಿಸಿಕೊಂಡು ಅಧಿಕ ಇಳುವರಿಯನ್ನು ಪಡೆಯಬಹುದು.
ಇವೆರಡೂ ಉದಾಹರಣೆಗಳು ಕೇವಲ ನಿದರ್ಶನವಷ್ಟ. ಇಂತಹ ಹಲವು ಸಾಧ್ಯತೆಗಳು ಈ ತಂತ್ರಜ್ಞಾನದಲ್ಲಿದೆ ಇದಕ್ಕೆ ನಮ್ಮ ಕಲ್ಪನೆಯಷ್ಟೆ ಮಿತಿ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.