ವಿಷಯಕ್ಕೆ ಹೋಗಿ

ಕನ್ನಡಿಯಲ್ಲಿ ಕಂಡ ಮುಖ..





ಪಕ್ಷಿಗಳು ಹೆಚ್ಚಾಗಿ ನಮ್ಮನ್ನ avoid ಮಾಡ್ಲಿಕ್ಕೆ ನೋಡ್ತಾವೆ. ಅದರ ಆ ಗುಣದಿಂದಲೇ ಕೆಲವೊಂದು ಸಾರಿ ಈ ಪಕ್ಷಿಗಳು ಏನೋ ಕಳ್ಳ ಕೆಲಸ ಮಾಡ್ತಿವೆ ಅನ್ನಿಸ್ತಿರುತ್ತೆ. ನಾನು ಒಂದ್ಸಾರಿ ಫಣಸೋಲಿ campನಲ್ಲಿ ಹಿಂಭಾಗದಲ್ಲಿ shaving ಮಾಡ್ಕೊಂಡು ನಿಂತಿದ್ದೆ.

ನನ್ನ ಹಿಂದೆ ತೇಗ ಮರದ plantation ಇತ್ತು. ಯಾವುದೋ ಒಂದು ಮರದಿಂದ ಎನೋ ಸದ್ದು ಬರ್ತಿತ್ತು. ನಾನು ಹಿಂದೆ ತಿರುಗಿ ನೋಡಿದ ತಕ್ಷಣ ಸದ್ದು ನಿಲ್ಲುತ್ತಿತ್ತು. ಅಂದ್ರೆ ಯಾವುದೋ ಪ್ರಾಣಿಯೋ ಪಕ್ಷಿಯೋ ನನ್ನ ಕಡೆ ಒಂದು ಕಣ್ಣು ಇಟ್ಕೊಂಡೇ ಏನೋ ಕೆಲಸ ಮಾಡ್ತಿದೆ! ಇಲ್ಲಾಂದ್ರೆ ನಾನು ತಿರುಗಿ ನೋಡಿದ ತಕ್ಷಣ ಅದ್ಯಾಕೆ ತನ್ನ ಕೆಲಸ ನಿಲ್ಲಿಸ್ಬೇಕು? ಆದ್ರೆ ಸದ್ದು ಎಲ್ಲಿಂದ ಬರ್ತಿದೆ ಅಂತ ಗೊತ್ತಾಗ್ಲಿಲ್ಲ. ಸುಮಾರು ಹೋತ್ತು ಗಮನಿಸಿದ ಮೇಲೆ ಅದು ಒಂದು ತೇಗದ ಮರದ ಮೇಲಿನಿಂದ ಬರ್ತಿದೆ ಅಂತ ಗೊತ್ತಾಯ್ತು. ಯಾವ್ದೋ ಪಕ್ಷಿ ಅದನ್ನ ಕುಟ್ಟುತ್ತಿದೆ ಅಂತ ತಿಳಿತು. ಆದ್ರೆ ಯಾವ ಪಕ್ಷಿ ಅಂತ ಗೊತ್ತಾಗ್ಲಿಲ್ಲ. ನನಗಿದ್ದ ಅಡಚಣೆ ಅಂದ್ರೆ ನಾನು ಹಿಂದೆ ತಿರುಗಿ ನೋಡಿದ ತಕ್ಷಣ ಸದ್ದು ನಿಲ್ತಿತ್ತು. ಯಾವ್ದುಕ್ಕೂ ಇರಲಿ ಅಂತ ಒಳಗೆ ಹೋಗಿ ನನ್ನ binocular ತಂದೆ. ಆದ್ರೂ ನನಗೆ ಅದ್ಯಾವ ಪಕ್ಷಿ ಅಂತ ನೋಡ್ಲಿಕ್ಕೆ ಆಗ್ಲಿಲ್ಲ. ನಾನು ಹಿಂದೆ ತಿರುಗಿ ನೋಡಿದ್ರೆ ತಾನೆ ಆ ಪಕ್ಷಿ ಸದ್ದು ಮಾಡೋದು ನಿಲ್ಲಿಸ್ತಿದ್ದದ್ದು, ನಾನು shaving ಮಾಡ್ಕೋಳ್ತಿದ್ನಲ್ಲ, ನಾನು ನನ್ನ ಮುಂದಿದ್ದ ಕನ್ನಡಿನೇ ಸ್ವಲ್ಪ ಓರೆ ಮಾಡ್ಕೊಂಡು ನೋಡ್ಲಿಕ್ಕೆ ಶುರುಮಾಡ್ದೆ.

ಅದು ಒಂದು Brown Capped Pygmy Woodpecker, ಅಲ್ಲಿ ಗಂಡು, ಹೆಣ್ಣು ಎರಡೂ ಪಕ್ಷಿಗಳೂ ಇದ್ವು. ಅದು ಅಲ್ಲಿ ಗೂಡು ಮಾಡ್ತಿತ್ತು ಅನ್ಸುತ್ತೆ. ಯಾಕಂದ್ರೆ ಎರಡೂ ಪಕ್ಷಿಗಳೂ ಒಂದಾದಮೇಲೆ ಒಂದು ಗೂಡು ಕೊರೆಯೋದನ್ನ ಮಾಡ್ತಿತ್ತು. ಆಮೇಲೆ ಸುಮಾರು ಎರಡು ದಿನ ಅಲ್ಲೆಲ್ಲಾ ಈ ಪಕ್ಷಿಗಳ activities ನಡ್ದೇ ಇತ್ತು. ಆಮೇಲೇ ನಾನು ಭದ್ರಾಗೆ ಹೋದೆ. ಆ ಪಕ್ಷಿಗಳು ಏನು ಮಾಡ್ಕೊಂಡ್ವೋ ಗೊತ್ತಾಗ್ಲಿಲ್ಲ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.