ವಿಷಯಕ್ಕೆ ಹೋಗಿ

ಪಕ್ಷಿ ವೀಕ್ಷಣೆ ಮತ್ತು ಛಾಯಾಗ್ರಹಣ


ಪಕ್ಷಿಗಳೆಲ್ಲಾ ನಾವು ನೋಡ್ದಾಗ ಆಹಾರ ಹುಡುಕ್ಕೊಂಡೋ ಇಲ್ಲಾ ಗೂಡೂ ಮಾಡೋದ್ರಲ್ಲೋ busy ಆಗಿರ್ತಾವೆ. ಅದ್ರಲ್ಲಿ ಎಷ್ಟು involve ಆಗಿರುತ್ವೆ ಅಂದ್ರೆ ಒಂದೊಂದ್ಸಾರಿ ಯಾರು ಬಂದ್ರೂ ಗಮನಿಸೋದಿಲ್ಲ.
Castle rockನ ಹತ್ರ ಇವೋಲಿ ಅಂತ ಒಂದೂರು. ಅಲ್ಲಿ ಒಂದು ಪುಟ್ಟ ಹೊಳೆಯಿದೆ. ಒಂದು ದಿನ ನಾನು ಜೀಪಿನಲ್ಲಿ ಆ ಹೊಳೆನ ದಾಟುತ್ತಿದ್ದೆ. ಸಾಮಾನ್ಯವಾಗಿ ಹೊಳೆ, ನದಿಗಳ ಹತ್ರ ಯಾವುದಾದ್ರೂ ಪ್ರಾಣಿನೋ, ಪಕ್ಷಿನೋ ಕಾಣಬಹುದು ಅಂತ, ಹೊಳೆ ನದಿಗಳ ಹತ್ರ ತುಂಬಾ ನಿಧಾನವಾಗಿ ಜೀಪ್ ಓಡಿಸ್ತೀನಿ. ಆವಾಗೆಲ್ಲಾ ಒಂದಲ್ಲ ಒಂದು ಪ್ರಾಣಿನೋ ಪಕ್ಷಿನೋ ಕಂಡೇ ಕಾಣುತ್ತೆ. ನಾನು ಹೊಳೆ ಹತ್ರ ಆಗ್ತಿದ್ದಂತೆ ಜೀಪ್ ನಿಧಾನ ಮಾಡ್ದೆ. ಹೊಳೆಯ ಮಧ್ಯದಲ್ಲಿ ಒಂದು ಕಲ್ಲಿನ ಮೇಲೆ ಒಂದು Common Kingfisher ಕುಳಿತಿತ್ತು. ಅದನ್ನ ನೋಡಿ ಜೀಪ್ ನಿಲ್ಲಿಸಿದೆ. ಅದು ನೀರನ್ನೇ ನೋಡುತ್ತಾ ಹೊಂಚು ಹಾಕಿ ಕುಳಿತಿತ್ತು. ಕೆಲವು ಕ್ಷಣಗಳಾದ ಮೇಲೆ ನಿಧಾನವಾಗಿ ಜೀಪನ್ನು ನೀರಿನ ಹತ್ರ ತಗೊಂಡು ಹೋದೆ. ಆಗಲೂ ಪಕ್ಷಿ ಹಾರಲಿಲ್ಲ, ನನ್ನ ಜೀಪಿನ ಕಡೆ ಗಮನ ಕೊಡಲೂ ಇಲ್ಲ. ಆರೆ! ಇನ್ನೂ ಸ್ವಲ್ಪ ಹತ್ರ ತಗೊಂಡು ಹೋಗಿ ನೋಡೋಣ ಅಂತ ನಾನು ಜೀಪನ್ನ ನೀರಿಗೆ ಇಳಿಸಿದೆ. Kingfisherಗೆ ಎನನ್ನಿಸಿತೋ ಏನೋ, ಹಾರಿ ಬಂದು ಜೀಪಿನ ಬಾನೆಟ್ ಮೇಲೆ ಕುಳಿತುಕೊಂಡು ನೀರನ್ನೇ ನೋಡ ತೊಡಗಿತು! ನನ್ನಿಂಡ ಮೂರಡಿ ದೂರದಲ್ಲೇ ಆ ಪಕ್ಷಿ ಕುಳಿತಿದೆ. ನಾನು ಪಕ್ಷಿನ ನೋಡ್ತಾ, ಪಕ್ಷಿ ನೀರನ್ನೇ ನೋಡ್ತಾ ಸುಮಾರು ಒಂದು ನಿಮಿಷ ಆಯ್ತು. ಆ ಪಕ್ಷಿನ ಅವತ್ತು ತುಂಬಾ ಸೂಕ್ಷ್ಮವಾಗಿ ಗಮನಿಸಿದೆ. ಕೊನೆಗೆ ಅದರ ಒಂದು photoನಾದ್ರೂ ತೆಗೆಯೋಣ ಅಂತ ಮೆಲ್ಲಗೆ ನನ್ನ ಕಾಲಿನ ಹತ್ರ ಇದ್ದ cameraಗೆ ಕೈ ಹಾಕ್ದೆ. ನನ್ನ ಸ್ವಲ್ಪವೇ ಚಲನೆಗೆ ಪಕ್ಷಿ alert ಆಯ್ತು. ಒಂದು ಸಾರಿ ನನ್ನ ಕಡೆ ನೋಡಿತು. ಆವಾಗ ಅದಕ್ಕೆ ಗೊತ್ತಾಗಿರ್ಬಹುದು ತಾನೆಲ್ಲಿದ್ದೇನೆ ಅಂತ. ಮರುಕ್ಷಣ kingfisher ಹಾರಿಹೋಯ್ತು. ಆವತ್ತು ನನ್ನ ಕೈಗೆ camera ಸಿಕ್ಕಿದ್ರೂ ಕೂಡ ಒಳ್ಳೆ photo ತೆಗಿತಿದ್ದೇ ಅಂತ ಹೇಳಲಾರೆ. ಎಷ್ಟೋ ಸಾರಿ camera ಇದ್ದೂ ನಾವು ಕೆಲವೊಂದು ಕ್ಷಣಗಳನ್ನು ಸೆರೆ ಹಿಡಿಯೋದಿಕ್ಕಾಗೋದಿಲ್ಲ. ಅವುಗಳನ್ನ ಸುಮ್ನೆ ಅನುಭವಿಸಬೇಕಷ್ಟೇ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.