ವಿಷಯಕ್ಕೆ ಹೋಗಿ

ಕಾಡು ಮತ್ತು ನಾನು


ಎಷ್ಟೋ ಸಮಯ ಕಾಡಿನಲ್ಲಿ ಸುತ್ತಾಡ್ತಿನಲ್ಲ ಅದು ಯಾಕೆ ಖುಷಿ ಕೊಡುತ್ತೆ ಅಂತ ಆವಾಗ ಗೊತ್ತಾಗೊದಿಲ್ಲಸುಮಾರು ಸಾರಿ ಸಾಕಪ್ಪ ಈ ಕಾಡು ಅನ್ನಿಸಿಬಿಡುತ್ತೆ.



ಸ್ವಲ್ಪ ಸಮಯ ಅಷ್ಟೆಮತ್ತೆ ಕಾಡು ಸೆಳೆಯುತ್ತೆಅದಕ್ಕೆ ತುಂಬಾ ಕಾರಣಗಳಿವೆಒಂದು ಸಾರಿ Castle Rock ಹತ್ರ ಇರೋ ಕಾಡಿನಲ್ಲಿ ಕುವೇಷಿ ಅಂತ ಒಂದೂರುಅಲ್ಲಿ ಬರುತ್ತಿದ್ದೆಒಂದು ಸಣ್ಣ ಸೇತುವೆ ಇದೆ ಅಲ್ಲಿಅದರ ಕೆಳಗೆ ಒಂದು ಕೊಳಅದರಲ್ಲಿ ಅದ್ಯಾವುದೋ ಒಂದು ಪಕ್ಷಿ ನೀರಿನಲ್ಲಿ ಏನನ್ನೋ ಹುಡುಕ್ತಾ ಇತ್ತುನೋಡಿದ ತಕ್ಷಣಕ್ಕೆ ಅದು ಒಂದು egret ಇರಬಹು ಅನ್ನಿಸಿತ್ತುಆದರೆ ಅದು ಸ್ವಲ್ಪ ಕಡು ಬಣ್ಣ ಇತ್ತುನಾನು ಯಾವುದೇ ಸದ್ದು ಮಾಡದೆ ಅದನ್ನೇ ನೋಡುತ್ತಾ ನಿಂತೆಸ್ವಲ್ಪ ದೂರ ನಿಂತು ನೋಡುತ್ತಿದ್ದೆಆದ್ದರಿಂದ ಆ ಪಕ್ಷಿಗೆ ಯಾವುದೇ ತೊಂದರೆ ಆಗಿಲ್ಲದೆ ಇರಬಹುದುಸುಮಾರು ಹೊತ್ತು ನೋಡಿದ ಮೇಲೆ camera ತೆಗೆದು ಅದರ photoಗಳನ್ನು ತೆಗೆದೆಒಂದು videoಕೂಡ ಮಾಡ್ದೆನಾನೀಗ ಆ video ನೋಡಿದ್ರೆ ಈ ಕ್ಷಣಕ್ಕೆ ಮತ್ತೆ ಮತ್ತೆ ನನಗೆ ಆ ಕಾಡಿನೊಳಗೆ ಹೋಗಿಬಿಡಬೇಕು ಅನ್ನಿಸುತ್ತೆಆ ಸ್ವಚ್ಛಂದತೆಆ ಸೌಂದರ್ಯಆ ಪ್ರಶಾಂತತೆಇವೆಲ್ಲ ಮತ್ತೆ ಮತ್ತೆ ನನ್ನನ್ನು ಸೆಳೆಯುತ್ತದೆಕಾಡು ಸುತ್ತುವುದು ನನಗೆ ಒಂದು ಚಟವಾಗಿಬಿಟ್ಟಿದೆಇವೆಲ್ಲವನ್ನು ಸವಿಯುವ ಚಟವಾಗಿಬಿಟ್ಟಿದೆ.

ಅದು ಒಂದು Western Reef Egret ಆಗಿತ್ತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.