ಬೆಂಗಳೂರಿನ ಆಕಾಶದ ತುಂಬಾ ಮುಂಗಾರು ಪೂರ್ವ ಮೋಡಗಳು ಆವರಿಸಿತ್ತು. ತಾಪಮಾನವೂ ಇಳಿದು ಸ್ವಲ್ಪ ನಿರಾಳವೆನಿಸಿತ್ತು. ಈ ಮಳೆ ಮೋಡದ ದಿನಗಳು ಚೇತೋಹಾರಿ! ನಮ್ಮ ಮನೆಯ ಮುಂದೆ ಇರುವ ನೇರಳೆ ಮರ ( Syzygium cumini) ಈಗ ಹೊಸದಾಗಿ ಚಿಗುರಿದ ಎಲೆಗಳಿಂದ ಉಜ್ವಲವಾಗಿ ಹೊಳೆಯುತ್ತಿತ್ತು . ಈ ನಿತ್ಯಹರಿದ್ವರ್ಣ ಪ್ರಭೇದ ಸದಾ ಕಾಲ ಎಲೆಗಳಿಂದ ತುಂಬಿದ್ದರೂ ಮಳೆಯಿಂದ ತೊಳೆದ ಎಲೆಗಳು ಹಸುರಿನಿಂದ ಕಂಗೊಳಿಸುತ್ತಿದ್ದವು. ನೇರಳೆ ಹಣ್ಣುಗಳೆಂದರೆ ಯಾರಿಗೆ ಇಷ್ಟವಿಲ್ಲ? ಆದರೆ ನಮ್ಮ ಮನೆಯ ಮುಂದಿನ ಈ ಮರ ಇನ್ನೂ ಹಣ್ಣು ಬಿಡಲು ಪ್ರಾರಂಭಿಸಿಲ್ಲ ! ಈ ಚಿಕ್ಕ ಮರಕ್ಕೂ ತನ್ನದೇ ಆದ ಒಂದು ಕಥೆಯಿದೆ. ಇದು ಸಣ್ಣ ಗಿಡವಾಗಿದ್ದಾಗ ಜಿ.ಕೆ.ವಿ.ಕೆ ಸಮೀಪದ ನಮ್ಮ Office ನ ಮುಂದೆ ನೆಡಲು ಇದನ್ನು ತಂದಿದ್ದೆವು. ಆದರೆ ಆ ಕಟ್ಟಡದ ಯಜಮಾನ ಅದನ್ನು ಅಲ್ಲಿ ನೆಡಲು ಒಪ್ಪಲಿಲ್ಲ! ಕಾರಣ ಸರಳ - ಮುಂದೊಂದು ದಿನ ಅದು ಹಣ್ಣು ಬಿಟ್ಟು , ಮಕ್ಕಳು ನೇರಳೆ ಹಣ್ಣಿಗಾಗಿ ಕಲ್ಲು ಎಸೆದರೆ? ನಮ್ಮ Office ನ ಕಟ್ಟಡದಲ್ಲಿ ಬಹುತೇಕ ಗಾಜು ಇರುವುದರಿಂದ ನೇರಳೆ ಗಿಡವನ್ನು ಅಲ್ಲಿ ನೆಡುವುದು ಒಳ್ಳೆಯದಲ್ಲ ಎಂದು ಭಾವಿಸಿದ . ಎಂಥಾ ದೂ(ದು)ರಾಲೋಚನೆ! ಹೀಗೆ ಪಕ್ಕಕ್ಕಿಟ್ಟ ಗಿಡವನ್ನು ಒಂದು ದಿನ ಸದ್ದಿಲ್ಲದೆ ಮನೆಗೆ ತಂದೆ. Office ನಲ್ಲಿ ಅದು ಯಾರ ಗಮನಕ್ಕೂ ಬರಲಿಲ್ಲ. ಮನೆಗೆ ತಂದಾಗ ಎಲ್ಲರೂ ಅದನ್ನು ಮಾವಿನ ಗಿಡವೆಂದೇ ಭಾವಿಸಿದರು. ನಮ್ಮ ಮನೆಯ...
’ಕಲರವ’ ಒಂದು ಪುಟ್ಟ ಗುಂಪು. ಪಕ್ಷಿವೀಕ್ಷಣೆ, ಪರಿಸರ ಸಂರಕ್ಷಣೆ, ಖಗೋಳ, ಫೋಟೊಗ್ರಫಿ, ಸೈಕ್ಲಿಂಗ್, ಸಿನಿಮಾ, ಪ್ರವಾಸ, ಹೀಗೆ ಹಲವಾರು ಚಟುವಟಿಕೆಗಳು ಮತ್ತು ಚರ್ಚೆಯ ವೇದಿಕೆ. ಸಮಾನ ಅಭಿರುಚಿಯ ಗೆಳೆಯರ ಓದು, ಓಡಾಟದ ವಿನಿಮಯ ಮತ್ತು ಆ ಮೂಲಕ ಒಡನಾಟ ಈ ಕಲರವ