ವಿಷಯಕ್ಕೆ ಹೋಗಿ

ಮುತ್ತುಗ

ಮುತ್ತುಗ ನಮ್ಮ ದೇಶದ ಪವಿತ್ರವಾದ ಮರಗಳಲ್ಲಿ ಒಂದು. ನಮ್ಮ ಬಯಲುಸೀಮೆ ಅಥವಾ ಕಾವಲು ಪ್ರದೇಶಗಳಲ್ಲಿ ಕಂಡುಬರುವ ಒಂದು ಸುಂದರವಾದ ಮರಳಲ್ಲಿ ಒಂದು.

ಮುತ್ತುಗದ ಹೂ


ಇದರ ವೈಜ್ಞಾನಿಕ ಹೆಸರು ಬುಟಿಯ ಮೋನೋಸ್ಪರ್ಮ (butea monosperma).ಈ ಮರಕ್ಕೆ ಇಂಗ್ಲೀಷಿನಲ್ಲಿ ಫ್ಲೇಮ್ ಆಫ್ ದ ಫಾರೆಸ್ಟ್, ಪ್ಯಾರಟ್ ಟ್ರೀ ಅಥವಾ ಬಾಸ್ಟರ್ಡ್ ಟೀಕ್ ಎಂದು ಕರೆಯುತ್ತಾರೆ. ಸಂಸ್ಕೃತದಲ್ಲಿ ತಮಾಲ ಎಂಬ ಹೆಸರಿದೆ. ಹಿಂದಿಯಲ್ಲಿ ಪಾಲಾಶ, ಚಲ್ಚ, ಕಂಕ್ರೇಯಿ, ಛೆಉಲ ಹೆಸರುಗಳು ಇವೆ. ಮರಾಠಿಯಲ್ಲಿ ಪಳಸ್ ಎಂದು ಕರೆಯುತ್ತಾರೆ ಗುಜರಾತಿಯಲ್ಲಿ ಕೆಸುಡೊ ಎಂದು ಕರೆಯುತ್ತಾರೆ. ತಮಿಳಿನಲ್ಲಿ ಪೊರುಸಮ್, ಪರಸು. ತೆಲುಗಿನಲ್ಲಿ ಮೊದುಗ ಎಂದು ಕರೆಯುತ್ತಾರೆ. ಮಲಯಾಳದಲ್ಲಿ ಮುರಿಕು, ಶಮತ ಎಂದು ಕರೆಯುತ್ತಾರೆ.

ಈ ಮರ ಭಾರತ ಉಪಖಂಡ ಸೇರಿದಂತೆ ಮ್ಯಾನ್ಮಾರ್, ಥಾಯ್ಲ್ಯಾಂಡ್, ಮಲೇಶಿಯಾ, ಲಾವೋಸ್, ಕಾಂಬೋಡಿಯಾ, ವಿಯೆಟ್ನಾಂ ಮತ್ತು ಇಂಡೋನೇಷಿಯಾ ದೇಶಗಳಲ್ಲಿ ಕಂಡುಬರುತ್ತದೆ.

ಫ್ಲೇಮ್ ಆಫ್ ದ ಫಾರೆಸ್ಟ್ ಅಂದರೆ ಕಾಡಿನ ಜ್ವಾಲೆ

ಮುತ್ತುಗ ಸಣ್ಣ ಅಥವಾ ಮಧ್ಯಮ ಗಾತ್ರದ ಮರ ಇದು ಸುಮಾರು 10 ಮೀಟರ್ ಎತ್ತರದವರೆಗೆ ಬೆಳೆಯುತ್ತದೆ. ಇದು ಬಹಳ ನಿಧಾನವಾಗಿ ಬೆಳೆಯುವ ಮರ. ಇದರ ಕಾಂಡ ಅಂಕುಡೊಂಕಾಗಿರುತ್ತದೆ ಮತ್ತು ಸುಮಾರು 15ರಿಂದ 20 ಸೆಂಟಿಮೀಟರ್‌ನಷ್ಟು ವ್ಯಾಸ ಇರುತ್ತದೆ. ಇದರ ತೊಗಟೆ 5ರಿಂದ 6 ಮಿಲಿಮೀಟರ್‌ನಷ್ಟು ದಪ್ಪ ಇರುತ್ತದೆ ಮತ್ತು ಬೂದು ಅಥವಾ ಕಂದು ಬಣ್ಣದಿಂದ ಕೂಡಿರುತ್ತದೆ. ಇದರ ಎಲೆಗಳು ಸಂಕೀರ್ಣವಾಗಿದ್ದು ಟ್ರೈ ಫೊಲಿಯೆಟ್ ಆಕಾರದಲ್ಲಿ ಇರುತ್ತದೆ. ಸಾಮಾನ್ಯವಾಗಿ ಫೆಬ್ರವರಿ-ಮಾರ್ಚ್ ತಿಂಗಳಿನಲ್ಲಿ ಹೂ ತಳೆಯುತ್ತದೆ. ಹೂಗಳು ಗೊಂಚಲಿನಲ್ಲಿ ಇರುತ್ತವೆ ಮತ್ತು ಕೇಸರಿ ಬಣ್ಣದಿಂದ ಕೂಡಿದ್ದು ನೋಡಲು ಬಲು ಆಕರ್ಷಕ ಮತ್ತು ವರ್ಣಮಯವಾಗಿರುತ್ತದೆ. ಇದು ಹೂ ಬಿಡುವ ಕಾಲಕ್ಕೆ ಇದರ ಎಲೆಗಳು ಉದುರುವ ಕಾರಣ ಮತ್ತು ದೂರದಿಂದ ನೋಡಲು ಬೆಂಕಿಯಂತೆ ಕಾಣುವುದರಿಂದ ಈ ಮರಕ್ಕೆ ಫ್ಲೇಮ್ ಆಫ್ ದ ಫಾರೆಸ್ಟ್ ಅಂದರೆ ಕಾಡಿನ ಜ್ವಾಲೆ ಎಂದು ಹೆಸರು ಬಂದಿದೆ. ಇದರ ಕಾಯಿಗಳು ಹುರುಳಿ ಕಾಯಿ(pod) ರೀತಿಯಲ್ಲಿ ಇದ್ದು ಸುಮಾರು 15ರಿಂದ 20 ಸೆಂಟಿಮೀಟರ್ ಉದ್ದ ಮತ್ತು ನಾಲ್ಕರಿಂದ ಐದು ಸೆಂಟಿಮೀಟರ್‌ನಷ್ಟು ಅಗಲ ಇರುತ್ತದೆ.

ಎಲೆಗಳ ಫೊಲಿಯೆಟ್ ಆಕಾರ

ಈ ಮರ ಜೀವಜಾಲದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದರ ಹೂಗಳು ಅನೇಕ ಕೀಟ ಮತ್ತು ಪಕ್ಷಿಗಳನ್ನು ಆಕರ್ಷಿಸುತ್ತದೆ. ಹಿಂದು ಮತ್ತು ಬೌದ್ಧ ಧರ್ಮದಲ್ಲಿ ಮುಖ್ಯವಾದ ಮರ. ಇದರ ಎಲೆಗಳಿಂದ ಪತ್ರಾವಳಿ ಅಥವಾ ಊಟದ ಎಲೆಗಳನ್ನು ತಯಾರಿಸುತ್ತಾರೆ. ಇದರ ಹೂವಿನಿಂದ ಕೇಸರಿ ಬಣ್ಣವನ್ನು ತಯಾರಿಸುತ್ತಾರೆ ಇದನ್ನು ಹೋಳಿ ಹಬ್ಬದಲ್ಲಿ ಉಪಯೋಗಿಸಲಾಗುತ್ತದೆ. ಇದರ ಮರದಿಂದ ಪಡೆಯುವ ಅಂಟನ್ನು ಅಡುಗೆಯಲ್ಲಿ ಸಹ ಬಳಸುತ್ತಾರೆ ಮತ್ತು ಇದು ಅನೇಕ ಔಷಧಿಗಳಲ್ಲಿ ಬಳಕೆಯಿದೆ ಅಲ್ಲದೆ ಚರ್ಮ ಕೆಲಸಗಾರರು ಸಹ ಇದನ್ನು ಬಳಸುತ್ತಾರೆ. ಇಷ್ಟೆ ಅಲ್ಲದೆ ಸುಂದರವಾದ ಹೂವಿನಿಂದ, ಮುತ್ತುಗ ನಮ್ಮ ಸಂಸ್ಕೃತಿಯ ಅನೇಕ ಸಾಹಿತ್ಯಗಳಲ್ಲಿ ಮೂಡಿಬಂದಿದೆ.

ಬಯಲುಸೀಮೆ ಅಥವಾ ಕಾವಲು ಪ್ರದೇಶಗಳಲ್ಲಿ ಕಂಡುಬರುತ್ತದೆ
ಕಾಂಡ ಅಂಕುಡೊಂಕಾಗಿರುತ್ತದೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.