ವಿಷಯಕ್ಕೆ ಹೋಗಿ

ವಸ್ತುಗಳ ಅಂತರ್ಜಾಲ - ವಾಸ್ತುಶಿಲ್ಪ




ನಾವು ವಸ್ತುಗಳ ಅಂತರ್ಜಾಲ?” ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯಲು ಅದರ ವಾಸ್ತುಶಿಲ್ಪವನ್ನು ಅರಿಯಬೇಕಾಗುತ್ತದೆ. ಆರಂಭದ ದಿನಗಳಲ್ಲಿ ವಸ್ತುಗಳ ಅಂತರ್ಜಾಲದ ವಾಸ್ತುಶಿಲ್ಪವು ಮೂರು ಹಂತಗಳನ್ನು ಒಳಗೊಂಡಿತ್ತು ಆದರೆ ಇದು ಉಗಮವಾದಂತೆ ಹಂತಗಳು ಐದಕ್ಕೆ ಏರಿಕೆಯಾದವು. ವಸ್ತುಗಳ ಅಂತರ್ಜಾಲದ ವಾಸ್ತುಶಿಲ್ಪವನ್ನು ಕೆಳಗಿನ ಐದು ಹಂತಗಳಲ್ಲಿ ವಿಂಗಡಿಸಲಾಗಿದೆ.



1. ಗ್ರಹಣ (Perception layer)
2. ಸಾಗಾಣಿಕೆ (Transportation layer)
3. ಪ್ರಕ್ರಿಯೆ (Processing layer)
4. ಅನ್ವಯಿಕ (Application layer)
5. ವ್ಯವಹಾರ (Business layer)

ಗ್ರಹಣ ಹಂತ
ಈ ಹಂತದಲ್ಲಿ ಉಪಕರಣವೂ ತನ್ನ ಸುತ್ತಲಿನ ಪರಿಸರದಲ್ಲಿ ಆಗುವ ವ್ಯತ್ಯಯವನ್ನು ಗ್ರಹಿಸಿ ಮಾಹಿತಿ ರೂಪದಲ್ಲಿ ಸಂಗ್ರಹಿಸುತ್ತದೆ..

ಸಾಗಾಣಿಕೆ ಹಂತ
ಈ ಹಂತ ಗ್ರಹಣ ಹಂತದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಮುಂದಿನ ಪ್ರಕ್ರಿಯೆಗಾಗಿ ಕಳುಹಿಸಲು ನೆರವಾಗುತ್ತದೆ ಹಾಗೆಯೇ ಮುಂದಿನ ಹಂತಕ್ಕೆ ಬೇಕಾದ ಮಾಹಿತಿಯನ್ನು ರವಾನಿಸುತ್ತದೆ.

ಪ್ರಕ್ರಿಯೆ ಹಂತ
ಈ ಹಂತದಲ್ಲಿ ಮಾಹಿತಿಯನ್ನು ಶೇಖರಿಸಿ, ಅದನ್ನು ಪ್ರಕ್ರಿಯೆಗೆ ಒಳಪಡಿಸಿ ಮತ್ತು ವಿಶ್ಲೇಷಣೆಯನ್ನು ಮಾಡಿ ಮುಂದಿನ ಹಂತಕ್ಕೆ ಬೇಕಾದ ಸೇವೆಯನ್ನು ಒದಗಿಸುತ್ತದೆ.

ಅನ್ವಯಿಕ ಹಂತ
ಈ ಹಂತ ಬಳಕೆದಾರರಿಗೆ ಬೇಕಾದ ಮಾಹಿತಿಯನ್ನು ಮತ್ತು ಸೇವೆಯನ್ನು ಓದಬಲ್ಲ ಅಥವಾ ಚಿತ್ರಗಳ ರೀತಿಯಲ್ಲಿ ಒದಗಿಸುತ್ತದೆ.

ವ್ಯವಹಾರ ಹಂತ
ಈ ಹಂತ ವಸ್ತುಗಳ ಅಂತರ್ಜಾಲ ವ್ಯವಸ್ಥೆಯನ್ನು ನಿಯಂತ್ರಿಸುತ್ತದೆ. ಇಲ್ಲಿ ಎಲ್ಲಾ ಅನ್ವಯಗಳನ್ನು ನಿರ್ವಹಿಸಲಾಗುತ್ತದೆ ಅದರಲ್ಲೂ ವ್ಯವಹಾರ ಮತ್ತು ಲಾಭದ ಅನ್ವಯಗಳನ್ನು ಗೌಪ್ಯವಾಗಿ ನಿರ್ವಹಿಸಲಾಗುತ್ತದೆ.

ಒಂದು ಉದಾಹರಣೆ

ನಿಮ್ಮ ತೋಟದಲ್ಲಿ ಒಂದಷ್ಚು ಗಿಡಗಳಿವೆ. ಅವಕ್ಕೆ ನಿತ್ಯವು ನೀರನ್ನು ಒದಗಿಸಬೇಕು. ಕೆಲಸದ ಒತ್ತಡ ಮತ್ತು ಸಮಯದ ಅಭಾವದ ನಡುವೆ ನಮಗೆ ನೀರನ್ನು ಒದಗಿಸಲು ಕಷ್ಟವಾಗಬಹುದು ಅಲ್ಲದೆ ಕೆಲವೊಮ್ಮೆ ಮಳೆಯಿಂದಾಗಿ ನೀರಿನ ಅವಶ್ಯಕತೆ ಇರುವುದಿಲ್ಲ ಅಥವಾ ಕಮ್ಮಿ ಇರುತ್ತದೆ ಹಾಗಾಗಿ ತಂತ್ರಜ್ಞಾನವನ್ನು ಬಳಸಿ ಈ ಕಾರ್ಯವನ್ನು ಆಟೋಮೇಟ್ ಮಾಡಬಹುದು. ಮಣ್ಣಿನ ತೇವಾಂಶವನ್ನು ಅಳೆಯಬಲ್ಲ ಅರಿವುಕಗಳನ್ನು (sensors) ಅಳವಡಿಸಿದರೆ ಅದರಿಂದ ಮಣ್ಣಿನ ತೇವಾಂಶದ ಮಟ್ಟವನ್ನು ಸತತವಾಗಿ ಪಡೆಯಬಹುದು. ಒಂದು ವೇಳೆ ಮಣ್ಣಿನ ತೇವಾಂಶ ಕಮ್ಮಿ ಇದ್ದಲ್ಲಿ ನೀರಿನ ಪಂಪನ್ನು ಚಾಲು ಮಾಡಿ ನೀರನ್ನು ಒದಗಿಸಬಹುದು. ತೇವಾಂಶ ಒಂದು ಹಂತ ಮುಟ್ಟಿದ ಮೇಲೆ ನೀರಿನ ಪಂಪನ್ನು ನಿಲ್ಲಿಸಬಹುದು. ಈ ಕಾರ್ಯವನ್ನು ಮಾಡಲು ನಮಗೆ ಎಂಬೆಡೆಡ್ ಸಿಸ್ಟಮ್ ಅಥವಾ ಮೈಕ್ರೋಕಂಟ್ರೋಲರ್ ಅಗತ್ಯವಿರುತ್ತದೆ. ತೇವಾಂಶ ಸೆನ್ಸಾರ್ ಮೈಕ್ರೋ ಕಂಟ್ರೋಲರ್ ಮತ್ತು ನೀರಿನ ಪಂಪ್ ಒಳಗೊಂಡಂತಹ ಹಂತವೆ ಗ್ರಹಣ ಅಂತ..
ಈ ಮೇಲೆ ತಿಳಿಸಿದ ವ್ಯವಸ್ಥೆಯನ್ನು ಇಂಟರ್ನೆಟ್ ಸಹಾಯವಿಲ್ಲದೆಯೇ ಬಳಸಬಹುದು ಆದರೆ ಇದನ್ನು ದೂರದಿಂದಲೇ ನಿಯಂತ್ರಿಸಬೇಕೆಂದರೆ ಅಂತರ್ಜಾಲದ ವ್ಯವಸ್ಥೆ ಬೇಕಾಗುತ್ತದೆ. ಗ್ರಹಣ ಹಂತದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ದೂರದ ಕ್ಲೌಡ್ ಗೆ ರವಾನಿಸಬೇಕಾಗುತ್ತದೆ ಅದಕ್ಕಾಗಿ ನಮಗೆ ಒಂದು ವ್ಯವಸ್ಥೆ ಇರಬೇಕು ನಮ್ಮ ವೈಫೈ ರೋಟರ್, ಅಂತರ್ಜಾಲ ಇವುಗಳನ್ನೆಲ್ಲ ಒಳಗೊಂಡಂತ ವ್ಯವಸ್ಥೆಯೆ ಜಾಲ ವ್ಯವಸ್ಥೆ ಅಥವಾ ನೆಟ್ವರ್ಕ್. ಇಲ್ಲಿ ಮಾಹಿತಿ ರವಾನೆಯಾಗುವುದರಿಂದ ಈ ಹಂತವನ್ನು ಸಾಗಾಣಿಕೆ ಹಂತ ಎನ್ಮುತ್ತಾರೆ.
ಒಮ್ಮೆ ಮಾಹಿತಿಯು ಸರ್ವರ್ ಅಥವಾ ಕ್ಲೌಡ್‌ನಲ್ಲಿ ಸಂಗ್ರಹಗೊಂಡು ಶೇಖರಗೊಂಡ ಮೇಲೆ ಅದನ್ನು ಪ್ರಕ್ರಿಯೆಗೆ ಒಳಪಡಿಸಬೇಕಾಗುತ್ತದೆ ಈ ವ್ಯವಸ್ಥೆಗಾಗಿ ನಮಗೆ ಕಂಪ್ಯೂಟಿಂಗ್. ಅಗತ್ಯವಿರುತ್ತದೆ. ಪ್ರಕ್ರಿಯೆ ಹಂತದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಣೆಗೊಳಿಸಿ ಬಳಕೆದಾರರಿಗೆ ಬೇಕಾದ ಅಥವಾ ಓದಬಹುದಾದ ರೀತಿಯಲ್ಲಿ ಪರಿವರ್ತಿಸುತ್ತದೆ.
ಅನ್ವಯಿಕ ಹಂತದಲ್ಲಿ ಬಳಕೆದಾರರು ತಾವು ಬಳಸಿದ ಸೇವೆಯ ಮಾಹಿತಿಯನ್ನು ನೋಡಬಹುದು ಇದಕ್ಕಾಗಿ ಒಂದು ಮೊಬೈಲ್ ಅಥವಾ ಕಂಪ್ಯೂಟರ್ ಇರಬೇಕಾಗುತ್ತದೆ. ಇಲ್ಲಿ ಬಳಕೆದಾರರ ಗಿಡಗಳಿಗೆ ಎಷ್ಟು ನೀರನ್ನು ಸರಬರಾಜು ಮಾಡಲಾಗಿದೆ ಅದರಿಂದ ಬಳಕೆದಾರರಿಗೆ ಎಂತಹ ಫಲಿತಾಂಶ ದೊರಕಿದೆ ಎಂಬಂತಹ ಮಾಹಿತಿಗಳು ದೊರಕುತ್ತವೆ ಅಲ್ಲದೆ ಮುಂದೆ ಬಳಕೆದಾರರು ಕೈಗೊಳ್ಳಬೇಕಾದ ಕ್ರಮಗಳ ಸೂಚನೆಯನ್ನು . ಪಡೆಯಬಹುದು.
ಇದನ್ನೆಲ್ಲಾ ನಿಯಂತ್ರಿಸುವ ಹಂತವೇ ವ್ಯವಹಾರ ಹಂತ ಈ ಹಂತದಲ್ಲಿ ಹೊಸ ಬಳಕೆದಾರರ ಸೇರ್ಪಡೆ, ಬಳಕೆದಾರರು ಬಳಸುವ ಸೇವೆಯ ನಿಯಂತ್ರಣ, ಸೇವೆಗಳ ಬಳಕೆಯ ಬಿಲ್ಲಿಂಗ್ ಇಂತಹ ಕಾರ್ಯಗಳನ್ನು ಸಾಧಿಸಬಹುದು.





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.