ವಿಷಯಕ್ಕೆ ಹೋಗಿ

ಟಿಟ್ಟಿಭನ ಕಥೆ:



ಬಂಡೀಪುರದಲ್ಲಿ ಒಂದು ದಿನ Red Wattled Lapwing (ಕನ್ನಡದಲ್ಲಿ ಟಿಟ್ಟಿಭ) ಗೂಡು ನೋಡ್ದೆ. ಗೂಡು ಅಂದ್ರೆ ನಾವು ದಿನ ಓಡಾಡೋ ಜೀಪ್ ರೋಡಿನ ಒಂದು ಬದಿಯಲ್ಲಿ ಸ್ವಲ್ಪ ಹಳ್ಳ ಇರೋ ಕಡೆ ನಾಲ್ಕು ಮೊಟ್ಟೆ ಇಟ್ಟಿತ್ತು.
ನಾನು ಜೀಪ್ ನಿಲ್ಸಿ ಅದರ ಕಡೆ ನಡ್ಕೊಂಡು ಹೋದೆ, ಟಿಟ್ಟಿಭ ಯಾವ ಸದ್ದಿಲ್ದೆ ಎದ್ದು ಪಕ್ಕದಲ್ಲಿದ್ದ ಪೊದೆಯೊಳಗೆ ಓಡಿ ಮರೆಯಾಯ್ತು. ನಾನು ಮೊಟ್ಟೆಗಳ photo ತೆಕ್ಕೊಂಡು ಜೀಪ್ ಹತ್ತಿ ಬಂದೆ. ಇದಾಗಿ ಒಂದು ವಾರ ನಾನು ಆ ಕಡೆ ಹೋಗ್ಲಿಲ್ಲ. ಒಂದು ವಾರ ಬಿಟ್ಟು ಮತ್ತೆ ಆ ಕಡೆ ಹೋಗ್ಬೆಕಾಯ್ತು. ಆವಾಗ ಮತ್ತೆ ಆ ಗೂಡಿನ ಹತ್ರ ಜೀಪ್ ನಿಲ್ಸಿ ನೋಡ್ದೆ, ನಾಲ್ಕು ಮೊಟ್ಟೆಯಲ್ಲಿ ಮೂರು ಮರಿಯಾಗಿದ್ವು. ಈ ಬಾರಿ ತಾಯಿ ಹಕ್ಕಿ ಹಿಂದಿನ ತರಹ ಓಡಿ ಮರೆಯಾಗ್ಲಿಲ್ಲ, ಬದಲಿಗೆ ಸ್ವಲ್ಪ ದೂರ ನಿಂತು ಜೋರಾದ ದನಿಯಲ್ಲಿ ಕೂಗತೊಡಗಿತು. ಗೂಡಲ್ಲಿ ಮುದುರಿ ಕುಳಿತಿದ್ದ ಮರಿಗಳು ಎದ್ದು ಓಡ್ಲಿಕ್ಕೆ ಹೋಗಿ ಚೆಲ್ಲಾಪಿಲ್ಲಿಯಾದ್ವು. ತಾಯಿ ಹಕ್ಕಿ ಮೊಟ್ಟೆಯಿದ್ದಾಗ ಯಾಕೆ ಗಲಾಟೆ ಮಾಡ್ಲಿಲ್ಲ, ಮೊಟ್ಟೆಗಳು ಮರಿಯಾದ್ಮೆಲೆ ಯಾಕೆ ಇಷ್ಟೊಂದು ಗದ್ದಲ ಮಾಡ್ತಿದೆ ಅಂದ್ಕೊಂಡು ಆಶ್ಚರ್ಯದಿಂದ ಜೀಪ್ ಹತ್ತಿ ಬಂದೆ.

 ಸ್ವಲ್ಪ ಹಳ್ಳ ಇರೋ ಕಡೆ ನಾಲ್ಕು ಮೊಟ್ಟೆ ಇಟ್ಟಿತ್ತು...

 ನಾಲ್ಕು ಮೊಟ್ಟೆಯಲ್ಲಿ ಮೂರು ಮರಿಯಾಗಿದ್ವು...

ಕುಳಿತಿದ್ದ ಮರಿಗಳು ಎದ್ದು ಓಡ್ಲಿಕ್ಕೆ ಹೋಗಿ ಚೆಲ್ಲಾಪಿಲ್ಲಿಯಾದ್ವು...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.