ವಿಷಯಕ್ಕೆ ಹೋಗಿ

ಇರುವೆ ಸಿಂಗ (ANTLION)

ನೀವು ಕೆಲವು ಬಾರಿ ಮಣ್ಣಿನಲ್ಲಿ ಕೋನ್ ಆಕೃತಿಯ ಚಿಕ್ಕ ಹಳ್ಳವನ್ನು ನೋಡಬಹುದು. ಇದು ಒಂದು ಕೀಟದ ಕೆಲಸವೆಂದರೆ ನಂಬಲೇಬೇಕು.
ಈ ಕೀಟದ ಹೆಸರು ಇರುವೆ ಸಿಂಗ. ಇದು ಪ್ರಪಂಚದಾದ್ಯಂತ ಕಂಡು ಬರುತ್ತವೆ. ಮರಳುಗಾಡು ಹಾಗು ಒಣ ಪ್ರದೇಶ ಇದರ ಸ್ವಭಾವಿಕ ನೆಲೆ.
ಇರುವೆ ಸಿಂಗ ಮೈರ್ಮೆಲಿಯೋಂಟಿಡೆ. (Myrmeleontidae) ಎನ್ನುವ ಕುಟುಂಬಕ್ಕೆ ಸೇರುತ್ತದೆ. ಹಳ್ಳವನ್ನು ತೋಡುವುದು ಈ ಜೀವಿಯ ಲಾರ್ವಗಳು. ಉದ್ದೇಶ ತನ್ನ ಬೇಟೆಯನ್ನು ಹಿಡಿಯಲೆಂದು. ಹಳ್ಳವನ್ನು ತೋಡಿದ ನಂತರ ಲಾರ್ವ, ಹಳ್ಳದ ಮಧ್ಯದ ಮಣ್ಣಿನಲ್ಲಿ ಅಡಗಿಕೊಳ್ಳುತ್ತದೆ. ಇದರ ಹರಿತವಾದ ದವಡೆ (Mandible) ಮಾತ್ರ ಮಣ್ಣಿನಿಂದ ಹೊರಗಿರುತ್ತದೆ.
ತನ್ನ ಆಹಾರವನ್ನು ಅರಸುತ್ತ ಓಡಾಡುತ್ತಿರುವ ಇರುವೆಯೇನಾದರು ಹಳ್ಳದೊಳಗೆ ಕಾಲಿಟ್ಟರೆ ಅದರ ಕಥೆ ಅಲ್ಲಿಗೆ ಮುಗಿಯುತ್ತದೆ.  ಏಕೆಂದರೆ ಹಳ್ಳದ ಒಳಗಿನ ಮಣ್ಣು ಮೃಧುವಾಗಿದ್ದು, ಇರುವೆ ಹೊರ ಬರಲು ಪ್ರಯತ್ನಿಸಿದಂತೆಲ್ಲ ಮತ್ತಷ್ಟು ಒಳ ಸರಿಯುತ್ತದೆ. ಇನ್ನು ಕೆಲವೊಮ್ಮೆ ಲಾರ್ವ ಮಣ್ಣನ್ನು ಸಡಿಲಿಸಿ ಇರುವೆ ತನ್ನ ಹತ್ತಿರ ಬೇಗ ಬರುವಂತೆ ಮಾಡುತ್ತದೆ. ಲಾರ್ವ ಬೆಳೆದಂತೆಲ್ಲ ಅದು ತೋಡುವ ಹಳ್ಳವು ದೊಡ್ಡದಾಗುತ್ತದೆ. ಕೊನೆಗೊಂದು ಲಾರ್ವ ಗೂಡನ್ನು ನಿರ್ಮಿಸಿ ಆನಂತರ ವಯಸ್ಕ ಕೀಟವಾಗಿ ಮಾರ್ಪಾಡಾಗುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಂದಾರ

ಮಂದಾರ ಪುಷ್ಪ ಫೆಬ್ರವರಿ-ಮಾರ್ಚ್ ತಿಂಗಳು ಬಂತೆಂದರೆ ಭಾರತ ಮೂಲದ ಅನೇಕ ಮರಗಳು ಎಲೆಯುದುರಿಸಿ ಹೂ ಬಿಡುತ್ತವೆ. ಇದರಲ್ಲಿ ಕೆಲವು ಮರಗಳಂತು ಕೆಂಪು ಹಳದಿ ವರ್ಣಮಯ ಹೂ ತಳೆಯುತ್ತವೆ. ದೂರದಿಂದ ನೋಡಿದಾಗ

ಆಲೆ ಅಥವಾ ಬೆಪ್ಪಾಲೆ

ಹೂವುಗಳು ಬಾಲ್ಯದಲ್ಲಿ ನಮ್ಮ ಕನ್ನಡ ಪಠ್ಯಪುಸ್ತಕದಲ್ಲಿ ಚನ್ನಪಟ್ಟಣದ ಗೊಂಬೆಗಳ ಕುರಿತಾದ ಒಂದು ಪದ್ಯವಿತ್ತು‌ ಅದನ್ನು ಓದಿದ್ದ ನಮಗೆ ಅಂತಹ ಗೊಂಬೆಗಳನ್ನು ಕೊಳ್ಳಬೇಕೆಂಬ ಬಯಕೆ ಮೂಡದೆ ಇರಲಿಲ್ಲ. ಮುಂದೊಮ್ಮೆ ಮೈಸೂರಿಗೆ ಹೋದಾಗ ಚನ್ನಪಟ್ಟಣದಲ್ಲಿ ಗೊಂಬೆ ಮತ್ತು ಆಟಿಕೆಗಳನ್ನು ಕೊಂಡ ನೆನಪು. ಚನ್ನಪಟ್ಟಣದ ಗೊಂಬೆಗಳು ಜಗದ್ವಿಖ್ಯಾತವಾಗಿವೆ.

ನೇರಳೆ

ನೇರಳೆ ಎಂದೊಡನೆ ನಮಗೆ ಒಂದು ಪಂಚತಂತ್ರದ ಕಥೆ ನೆನಪಾಗುತ್ತದೆ. ಅದರಲ್ಲಿ ಒಂದು ಕೋತಿ ಮೊಸಳೆಯೊಂದರ ಸ್ನೇಹಗಳಿಸಿ ಅದಕ್ಕೆ ನೇರಳೆ ಹಣ್ಣಿನ ರುಚಿ ಹತ್ತಿಸುತ್ತದೆ.